ಕಳಸ (ಚಿಕ್ಕಮಗಳೂರು): ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಗಿರಿಶ್ರೇಣಿ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅರಣ್ಯ ಇಲಾಖೆಯು ಆನ್ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಿದೆ. ಈ ಹೊಸ ನಿಯಮ ಇದೇ 25ರಿಂದ ಜಾರಿಯಾಗಲಿದೆ.

ಎರಡೂ ಗಿರಿಶ್ರೇಣಿಗೆ ದಿನಕ್ಕೆ ಗರಿಷ್ಠ ತಲಾ 300 ಜನರಿಗೆ ಪ್ರವೇಶಾವಕಾಶ ಇರುತ್ತದೆ. ಒಬ್ಬರು ಮೂರು ಜನರಿಗೆ ಮಾತ್ರ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು.

ವಾರಾಂತ್ಯದಲ್ಲಿ 200 ಜನರಿಗೆ ಮಾತ್ರ ಆನ್ಲೈನ್ ಬುಕ್ಕಿಂಗ್ ಅವಕಾಶ ಇದೆ. ಸ್ಥಳೀಯ 50 ಜನರಿಗೆ ಪ್ರತ್ಯೇಕ ಬುಕ್ಕಿಂಗ್ ವ್ಯವಸ್ಥೆ ರೂಪಿಸಿದ್ದು, ಕುದುರೆಮುಖ ಅಥವಾ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಬುಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು.

ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ಬುಕ್ಕಿಂಗ್ಗೆ ಅವಕಾಶ ಇರಲಿದೆ. ಪ್ರತಿ ಗುರುವಾರ ಮಧ್ಯಾಹ್ನದ ನಂತರ ತತ್ಕಾಲ್ ಬುಕ್ಕಿಂಗ್ ಮಾಡಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ ಬಾಬು ತಿಳಿಸಿದ್ದಾರೆ.

ಚಾರಣಕ್ಕೆ ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್ಲೈನ್ ತಂತ್ರಾಂಶ (www.kudremukhanationalpark.in)ದಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಒಬ್ಬರಿಗೆ ನೇತ್ರಾವತಿ ಚಾರಣಕ್ಕೆ ₹500, ಕುದುರೆಮುಖಕ್ಕೆ ₹575 ದರ ನಿಗದಿ ಮಾಡಲಾಗಿದೆ.

ಹೋಂ ಸ್ಟೇ ಮಾಲೀಕರು ಕುದುರೆಮುಖ ಅಥವಾ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳ ಬಳಿ ಜೂನ್ ಅಂತ್ಯದ ಒಳಗೆ ಅಗತ್ಯ ದಾಖಲಾತಿ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ನೇತ್ರಾವತಿ ಚಾರಣಕ್ಕೆ ₹500, ಕುದುರೆಮುಖಕ್ಕೆ ₹575 ದರ ನಿಗದಿಮಾಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.