ಕಳಸ (ಚಿಕ್ಕಮಗಳೂರು): ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಮೂಡಿಗೆರೆ ತಾಲ್ಲೂಕಿನ ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದ ಸಿ.ಪ್ರಜ್ವಲ್ (25) ಎಂಬಾತನನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.
.ಅಶ್ಲೀಲ ವಿಡಿಯೋ ಹಂಚಿಕೆ: ಕ್ರಮಕ್ಕೆ ಒತ್ತಾಯಿಸಿದ ಜೆಡಿಎಸ್ ಮುಖಂಡ ಕವನ್ ಗೌಡ.
ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ ‘ಟ್ರೋಲ್ ದುಶ್ಯಾಸನ’ ಎಂಬ ಪೇಜ್ ಮತ್ತು ಚಾನಲ್ ಮೂಲಕ ನಗ್ನ ಮತ್ತು ಅರೆನಗ್ನ ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಬಂದ ಮಾಹಿತಿ ಆಧರಿಸಿ ಪೇಜ್‌ನ ಅಡ್ಮಿನ್ ಪ್ರಜ್ವಲ್ ವಿರುದ್ಧ ಐ.ಟಿ ಕಾಯ್ದೆ 67 ಮತ್ತು 67(ಎ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಕುದುರೆಮುಖ ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ಜತೆಗೆ ಮಹಿಳೆಯರ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯ ಸಾಲುಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.
.ಕಾಂತೇಶ್ ದಾವೆ: ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ.
‘ನಿರ್ದಿಷ್ಟ ವಿಡಿಯೊ ಹಂಚಿಕೆ ಮಾಡಿದ್ದಾರೆ ಎಂದಲ್ಲ. ಚಾನಲ್ ಮಾಡಿಕೊಂಡು ಬೇರೆ ಬೇರೆ ಅಶ್ಲೀಲ ವಿಡಿಯೊ ಹಂಚುತ್ತಿದ್ದರು ಎಂಬ ಆರೋಪದಲ್ಲಿ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
.ಅಶ್ಲೀಲ ವಿಡಿಯೊ ಪ್ರಕರಣ: ಶೀಘ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ- ಪರಮೇಶ್ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.