ಚಿಕ್ಕಮಗಳೂರು: ಪ್ರವಾಸಿಗರಿಗೆ ಕೆಲ ಷರತ್ತಗಳನ್ನು ವಿಧಿಸಿ ಕಾಫಿನಾಡು ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾಡಳಿತ ಶನಿವಾರ ಆದೇಶ ಹೊರಡಿಸಿದೆ. ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಣೆ ನಿಟ್ಟಿನಲ್ಲಿ ನಿಬಂಧನೆಗಳನ್ನು ವಿಧಿಸಿ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ.

ಗುಂಪಾಗಿ ಪ್ರಯಾಣಿಸುವಂತಿಲ್ಲ. ಬಸ್, ಟ್ಯಾಕ್ಸಿಗಳಲ್ಲಿ ಬರುವಂತಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ. ಅಂತರ ಕಾಪಾಡಬೇಕು ಮುಂತಾದ ನಿಬಂಧನೆಗಳನ್ನು ವಿಧಿಸಲಾಗಿದೆ.

ಹೋಟೆಲ್, ಹೋಂ ಸ್ಟೆ, ರೆಸಾರ್ಟ್‌ಗಳವರು ಪ್ರವಾಸಿಗರಿಗೆ ಗುಂಪಾಗಿ ತಂಗಲು ಅವಕಾಶ ನೀಡುವಂತಿಲ್ಲ. ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಬೇಕು. ಕೊಠಡಿಗಳಿಗೆ ಆಗಾಗ್ಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ನೈರ್ಮಲ್ಯ ಕಾಪಾಡಬೇಕು. ಪ್ರವಾಸಿಗೆ ಸೋಂಕಿನ ಲಕ್ಷಣಗಳಿದ್ದರೆ ಆರೋಗ್ಯ ಸಿಬ್ಬಂದಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.