ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವಣ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣ ಅ.6ರಿಂದ ಆರಂಭಗೊಳ್ಳಲಿದ್ದು, ಆನ್ಲೈನ್ ಮೂಲಕ ನೋಂದಾಯಿಸಿದವರಿಗೆ ಮಾತ್ರ ಚಾರಣಕ್ಕೆ ಅವಕಾಶ ಇರಲಿದೆ.

ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳಲು ಕುಕ್ಕೆ ಸಮೀಪದ ದೇವರಗದ್ದೆ ಎಂಬಲ್ಲಿಂದ ಅರಣ್ಯ ಪ್ರವೇಶಿಸಬೇಕು. ಸೋಮವಾರ ಪೇಟೆ ಬಳಿಯಿಂದಲೂ ಚಾರಣ ಆರಂಭಿಸಬಹುದು. ಕಳೆದ ವರ್ಷ ಕುಮಾರಪರ್ವತ ಚಾರಣಕ್ಕೆ ಭಾರಿ ಸಂಖ್ಯೆಯ ಚಾರಣಿಗರು ಬಂದಿದ್ದರಿಂದ ಸೀಮಿತ ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವರ್ಷದಿಂದ ಆನ್ಲೈನ್ ಬುಕ್ಕಿಂಗ್, ಹೊಸ ಮಾರ್ಗಸೂಚಿಸಿಯೊಂದಿಗೆ ಪರಿಸರ ಸ್ನೇಹಿ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದರು.

ಈ ವರ್ಷದಿಂದ ಅರಣ್ಯ ಇಲಾಖೆಯ ಅರಣ್ಯ ವಿಹಾರ ಎಂಬ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಿಕೊಂಡು ಚಾರಣ ಕೈಗೊಳ್ಳಬಹುದು. ದಿನಕ್ಕೆ 335 ಚಾರಣಿಗರಿಗೆ ಮಾತ್ರ ಅವಕಾಶ ಇರಲಿದೆ. ಕುಕ್ಕೆ ಸುಬ್ರಹ್ಮಣ್ಯ - ಕುಮಾರಪರ್ವತ, ಕೊಡಗಿನ ಬೀದಹಳ್ಳಿ - ಕುಮಾರಪರ್ವತ - ಬೀದಹಳ್ಳಿ, ಬೀದಹಳ್ಳಿ- ಕುಮಾರಪರ್ವತ - ಸುಬ್ರಹ್ಮಣ್ಯ ಎಂಬ ಮೂರು ಆಯ್ಕೆಗಳನ್ನು ಪ್ರವೇಶ ಚಾರಣ ಮಾರ್ಗ ಆಯ್ಕೆ ಆನ್ಲೈನ್ ಬುಕ್ಕಿಂಗ್ನಲ್ಲಿ ಸೂಚಿಸಲಾಗಿದೆ.

ಗಿರಿಗದ್ದೆಯಲ್ಲಿ ತಂಗಲು ನಿರ್ಬಂಧ: ಕುಮಾರ ಪರ್ವತಕ್ಕೆ ಚಾರಣ ಕೈಗೊಳ್ಳುವವರು ಗಿರಿಗದ್ದೆಯಲ್ಲಿ ವಾಸ್ತವ್ಯ ಮಾಡಿ ಮರುದಿನ ಬೆಳಿಗ್ಗೆ ಕುಮಾರಪರ್ವತದ ಮೇಲಿನ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ, ಈ ಬಾರಿ ತಂಗುವುದನ್ನು ನಿರ್ಬಂಧಿಸಲಾಗಿದೆ. ಕುಮಾರಪರ್ವತ ಚಾರಣ ಪ್ರವೇಶಕ್ಕೆ ಬೆಳಿಗ್ಗೆ 6ರಿಂದ 9ರ ಅವಧಿಯಲ್ಲಿ ಪ್ರವೇಶಿಸಬೇಕು. 11 ಗಂಟೆಗೆ ಗಿರಿಗದ್ದೆಯಿಂದ ಮೇಲಿನ ಪ್ರದೇಶಕ್ಕೆ ತೆರಳಬೇಕು. ಸಂಜೆ 6 ಗಂಟೆಗೂ ಮುನ್ನ ಚಾರಣದಿಂದ ನಿರ್ಗಮಿಸಬೇಕು. ಚಾರಣದ ಮಧ್ಯೆ ತಂಗಲು ಅವಕಾಶ ಇಲ್ಲ ಎಂಬುದೂ ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಅರಣ್ಯ ಇಲಾಖೆ ಹೊರಡಿಸಿದೆ. ಅವುಗಳನ್ನು ಪಾಲಿಸದೆ ಇದ್ದರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಗಿರಿಗದ್ದೆಯಲ್ಲಿ ಈ ಬಾರಿ ತಂಗಲು ಅವಕಾಶ ನಿರ್ಬಂಧಿಸಿರುವುದರಿಂದ ಸುಬ್ರಹ್ಮಣ್ಯದಿಂದ ಸುಮಾರು 12 ಕಿ.ಮೀ. ದೂರದ ಕಠಿಣ ಹಾದಿಯ ಕುಮಾರಪರ್ವತವನ್ನು ಗರಿಷ್ಠ 12 ಗಂಟೆಯೊಳಗೆ ವೀಕ್ಷಿಸಿ ಹಿಂದಿರಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.