ಮಂಗಳೂರು: ಕೇರಳದ ಜಾಮಿಯಾ ಸ–ಅದಿಯ್ಯದ 55ನೇ ವಾರ್ಷಿಕ ಸನದುದಾನ ಮಹಾ ಸಮ್ಮೇಳನವು ಇದೇ 22ರಿಂದ 24ರವರೆಗೆ ಕಾಸರಗೋಡು ದೇಳಿಯ ಸಅದಾಬಾದ್ನಲ್ಲಿ ನಡೆಯಲಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಕರ್ನಾಟಕದ ಕಾರ್ಯಕಾರಿ ಅಧ್ಯಕ್ಷ ಹಾಫಿಜ್ ಯಾಕೂಬ್ ಸ–ಅದಿ ನಾವೂರು, ‘445 ವಿದ್ಯಾರ್ಥಿಗಳಿಗೆ ಸಅದಿ ಪದವಿ, 44 ವಿದ್ಯಾರ್ಥಿಗಳಿಗೆ ಅಫ್ಲಲ್ ಸಅದಿ ಪದವಿ ಹಾಗೂ ಖುರಾನ್ ಕಂಠಪಾಠ ಮಾಡಿದ 28 ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ನೀಡಲಿದ್ದೇವೆ’ ಎಂದರು.

‘ಇದೇ 21ರಂದು ಬೆಳಗ್ಗೆ 10ಕ್ಕೆ ಪ್ರವಾಸ ಕುಟುಂಬ ಸಂಗಮವನ್ನು ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12ಕ್ಕೆ ಅಬ್ದುಲ್ಲಾ ಹುಸೇನ್ ಕಡವತ್ ಅಧ್ಯಕ್ಷತೆಯಲ್ಲಿ ಸ್ನೇಹ ಸಂಗಮ ನಡೆಯಲಿದೆ.’

‘ಇದೇ 22ರಂದು ಬೆಳಿಗ್ಗೆ 9ಕ್ಕೆ ಎಟ್ಟಿಕುಳಂ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ದರ್ಗಾ ಝಿಯಾರತ್ ಅಸ್ಸಯ್ಯಿದ್ ತೈಬುಲ್ ಬುಖಾರಿ ತ್ರಿಕರಿಪುರ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಅಸ್ಸಯ್ಯಿದ್ ಮದನಿ ತಂಙಳ್ ಮೊಗ್ರಾಲ್ ಮತ್ತು ಕೆ.ವಿ. ಮೊಯ್ದೀನ್ ಕುಂಞಿ ಮುಸ್ಲಿಯಾರ್ ಹಾಗೂ ಖತೀಬ್ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮಖ್ಬರ ಝಿಯಾರತ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಆದೂರು ನೇತೃತ್ವದಲ್ಲಿ ನಡೆಯಲಿದೆ. ಸಂಜೆ 4ಕ್ಕೆ ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಕಲ್ಲಟ್ರ ಅಬ್ದುಲ್ ಖಾದಿರ್ ಝಿಯಾರತ್ ಅಸ್ಸಯ್ಯಿದ್ ಇಬ್ರಾಹಿಂ ಪೂಕುಂಞ ತಂಙಳ್ ಕಲ್ಲಕಟ್ಟ ನೇತೃತ್ವದಲ್ಲಿ ನಡೆಯಲಿದೆ. ಎಕ್ಸ್ಪೊ, ಪುಸ್ತಕ ಪ್ರದರ್ಶನಗಳನ್ನೂ ಹಮ್ಮಿಕೊಳ್ಳಲಾಗಿದೆ.’

‘ಸಂಜೆ 4.30ಕ್ಕೆ ಸಮ್ಮೇಳನದ ಅಧಿವೇಶನ ಸಅದಿಯ್ಯ ಹಿರಿಯ ಉಪಾಧ್ಯಕ್ಷ ಪಟ್ಟುವಂ ಕೆ.ಪಿ. ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸುವರು. ಸಂಜೆ 6.30ಕ್ಕೆ ಆಧ್ಯಾತ್ಮಿಕ ಸಮ್ಮೇಳನ ಆರಂಭವಾಗಲಿದೆ.’

‘ಇದೇ 23ರಂದು ಬೆಳಗ್ಗೆ10ಕ್ಕೆ ಮುಶಾರಕ ನಡೆಯಲಿದೆ. ಮಧ್ಯಾಹ್ನ2ಕ್ಕೆ ಮುಕ್ತ ಚರ್ಚೆ ನಡೆಯಲಿದೆ. ಸಂಜೆ 6.30ಕ್ಕೆ ವರ್ಲ್ಡ್ ಆಫ್ ನೂರುಲ್ ಉಲಮಾ ಅಧಿವೇಶನ ಆರಂಭವಾಗಲಿದೆ. ರಾತ್ರಿ 8,.30ಕ್ಕೆ ನೂರ್ ಇಶಲ್ ಬುರ್ದಾ ಮಜ್ಲಿಸ್ ನಡೆಯಲಿದೆ.’

‘ಇದೇ 24ರಂದು ಬೆಳಿಗ್ಗೆ 8ಕ್ಕೆ ತ–ಅಮೀರೇ ಮಿಲ್ಲತ್ ವಿಚಾರಸಂಕಿರಣ, ಬೆಳಿಗ್ಗೆ 10ಕ್ಕ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ಸಅದಿ ವಿದ್ವಾಂಸರ ಸಮಾವೇಶ, 10.30ಕ್ಕೆ ವಿದ್ಯಾರ್ಥಿಗಳ ಸಮಾವೇಶ, 11.30ಕ್ಕೆ ಶರೀಯತ್ ಕಾಲೇಜು ವಿದ್ಯಾರ್ಥಿಗಳ ಪೋಷಕರ ಸಭೆ, ಮದ್ಯಾಹ್ನ 2ಕ್ಕೆ ಮಹಾಸಭೆ ನಡೆಯಲಿದೆ. ಸಂಜೆ 5ಕ್ಕೆ ಅಸ್ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಸನದುದಾನ ಸಮಾರೋಪ ನಡೆಯಲಿದೆ. ಶೇಖ್ ಉಮರ್ ಅಬೂಬಕರ್ ಸಾಲಿಂ ಉದ್ಘಾಟಿಸುವರು. ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಸನದುದಾನ ನಿರ್ವಹಿಸುವರು. ಭಾರತದ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಶೈಖ್ ಈಸಾ ಅಲ್ ಅಮೀರಿ ದುಬೈ ಮತ್ತು ಶೈಖ್ ಹೈಸಮ್ ದಾದ್ ಅಲ್ ಕರೀಂ ಭಾಗವಹಿಸಲಿದ್ದಾರೆ. ಸಅದುಲ್ ಉಲಮಾ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಸನದುದಾನ ಭಾಷಣ ಮಾಡಲಿದ್ದಾರೆ. ಅಸ್ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಪನ್ಯಾಸ ನೀಡಲಿದ್ದಾರೆ’ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಮುಖ್ಯ ಸಂಯೋಜಕ ಅಶ್ರಫ್ ಸಅದಿ ಮಲ್ಲೂರು, ಸಂಯೋಜಕ ಇಸ್ಮಾಯಿಲ್ ಸಅದಿ ಉರುಮಣೆ, ಉಪಾಧ್ಯಕ್ಷ ಅಬ್ದರ್ರಹ್ಮಾನ್ ಸಅದಿ, ಸಂಚಾಲಕ ಮನ್ಸೂರ್ ಸಅದಿ ಬಜಪೆ, ಎಂಯುಎಸ್ ಕರ್ನಾಟಕದ ಖಜಾಂಚಿ ಉಸ್ಮಾನ್ ಸಅದಿ ಪಟ್ಟೋರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.