‘ಪರ್ಯಾಯ ಉತ್ಪನ್ನ ಲಭ್ಯತೆ ಕೊರತೆ’
‘ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಅನುಷ್ಠಾನದ ಕುರಿತು ವಿಶ್ವಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಅಧೀನದ ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ (ಎನ್‌ಪಿಸಿ) ವತಿಯಿಂದ ಮಂಗಳೂರು ಆಗ್ರಾ ವಡೋದರಾ ಹಾಗೂ ಪಾಟ್ನ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಮಂಗಳೂರಿನ ನಿವಾಸಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಚೆನ್ನಾಗಿದೆ. ಆದರೆ ಪರ್ಯಾಯ ಉತ್ಪನ್ನಗಳ ಲಭ್ಯತೆ ಇಲ್ಲದ ಕಾರಣ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಇಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ’ ಎಂದು ಎನ್‌ಪಿಸಿ ಸಹಾಯಕ ನಿರ್ದೇಶಕ ಮಹೋತ್ಸವ್ ಪ್ರಿಯಾ ತಿಳಿಸಿದರು.