ಜಗತ್ತಿನ ಕಠಿಣ ಸ್ಪರ್ಧೆ ಎನಿಸಿರುವ ಟ್ರಯಥ್ಲಾನ್ನಲ್ಲಿ (triathlon) ಮೊದಲಿನಿಂದಲೂ ಹೆಸರು ಮಾಡಿದವರು ಮಂಗಳೂರಿನ ಐರನ್ಮ್ಯಾನ್ (Ironman) , ಕ್ಯಾನ್ಸರ್ ತಜ್ಞ ಡಾ. ಗುರುಪ್ರಸಾದ್ ಭಟ್. ಟ್ರಯಥ್ಲಾನ್ನಲ್ಲಿ ಅಂದರೆ, ಈಜು (Swimming), ಸೈಕ್ಲಿಂಗ್ (cycling) ಮತ್ತು ಓಟ (Running) ಈ ಮೂರು ವಿಭಾಗದಲ್ಲಿ ನಡೆಯುವ ಸ್ಪರ್ಧೆಯ ಸವಾಲನ್ನು ಮೀರಿದವರೇ ಐರನ್ಮ್ಯಾನ್. ಇಟಲಿಯಲ್ಲಿ (Italy) ನಡೆದ ಟ್ರಯಥ್ಲಾನ್ನಲ್ಲಿ ಎಲ್ಲ ವಿಭಾಗದ ಸವಾಲನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಭಾರತದ (India) ತ್ರಿವರ್ಣ ಧ್ವಜವನ್ನು ಹಾರಿಸಿದವರು ಈ ಗುರುಪ್ರಸಾದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.