ಲಕ್ಷದ್ವೀಪಕ್ಕೆ ಪ್ರವಾಸ 2021ರಿಂದ ಸ್ಥಗಿತ
ಲಕ್ಷದ್ವೀಪಕ್ಕೆ ಪ್ರವಾಸ 2021ರಿಂದ ಸ್ಥಗಿತ ಆದರೆ 2020-21ರ ಬಳಿಕ ಈ ರೀತಿಯ ನೇರ ಪ್ರಯಾಣ ಸಂಪೂರ್ಣ ಸ್ಥಗಿತವಾಗಿದೆ. ಆದರೆ ಲಕ್ಷದ್ವೀಪಕ್ಕೆ ಸರಕು ಮಂಗಳೂರಿನ ಹಳೆಬಂದರಿನ ಮೂಲಕ ಈಗಲೂ ರವಾನೆಯಾಗುತ್ತಿದೆ. ನಗರಕ್ಕೆ ಬರುವ ಸರಕು ಸಾಗಣೆ ಹಡಗಿನ ಸಿಬ್ಬಂದಿ ಇಲ್ಲಿ 24 ಗಂಟೆಗಳವರೆಗೆ ಮಾತ್ರ ಉಳಿಯಲು ಅವಕಾಶವಿದೆ. ಅಲ್ಲಿಂದ ಹಡಗಿನ ಮೂಲಕ ಬರುವ ಅಷ್ಟೂ ಸಿಬ್ಬಂದಿ ಅದೇ ಹಡಗಿನಲ್ಲಿ ಮರಳಬೇಕು. ಸದ್ಯಕ್ಕೆ ಅಲ್ಲಿನ ನಿವಾಸಿಗಳು ಇಲ್ಲಿಗೆ ಪ್ರಯಾಣ ಬೆಳೆಸುತ್ತಿಲ್ಲ. ಇಲ್ಲಿಂದ ಪ್ರವಾಸಿಗರೂ ಲಕ್ಷದ್ವೀಪಕ್ಕೆ ತೆರಳುತ್ತಿಲ್ಲ ಎಂದು ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಲಕ್ಷದ್ವಿಪ ಸಮೂಹದ ಕೆಲವು ದ್ವೀಪ ನಿವಾಸಿಗಳಿಗೆ ಮಂಗಳೂರೇ ಹತ್ತಿರವಾದರೂ ಅವರು ಕೊಚ್ಚಿಯನ್ನೇ ದೈನಂದಿನ ಅವಶ್ಯಕತೆಗಳಿಗಾಗಿ ಅವಲಂಬಿಸಿದ್ದಾರೆ. ಪ್ರತ್ಯೇಕ ಜೆಟ್ಟಿ ನಿರ್ಮಾಣವಾದ ಬಳಿಕ ಪ್ರವಾಸಿಗರು ಇಲ್ಲಿಂದ ಲಕ್ಷದ್ವೀಪಕ್ಕೆ ನೇರ ಪ್ರಯಾಣ ಬೆಳೆಸಲು ಅವಕಾಶ ಸಿಗಬಹುದು’ ಎಂದರು.