ದಾವಣಗೆರೆ: ರಾಜ್ಯ ಸರ್ಕಾರ ಪತನಗೊಳಿಸಲು ₹1,000 ಕೋಟಿಯನ್ನು ನಾಯಕರೊಬ್ಬರು ತೆಗೆದಿಟ್ಟಿದ್ದಾರೆ ಎಂಬ ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿಯ ಕೆಲ ನಾಯಕರು ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿರುವವರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

‘ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟದ ದಿಕ್ಕುತಪ್ಪಿಸಲು ಯತ್ನಾಳ ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಪರವಾಗಿ ವಕಾಲತ್ತು ವಹಿಸಿ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ನಡವಳಿಕೆಯನ್ನು ತದ್ದಿಕೊಂಡು ಬೇಷರತ್ ಕ್ಷಮೆಕೋರಬೇಕು. ಇಲ್ಲವಾದರೆ ಅವರ ವಿರುದ್ಧ ಪಕ್ಷ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಶಿವಯೋಗಿಸ್ವಾಮಿ ಇದ್ದರು.
.ಸರ್ಕಾರ ಉರುಳಿಸಲು ಸಾವಿರ ಕೋಟಿ ಮೀಸಲು: ಯತ್ನಾಳ ಆರೋಪ.ಯತ್ನಾಳ ಹೇಳಿಕೆ ಬಿಜೆಪಿ ಒಪ್ಪುವುದಿಲ್ಲ: ವಿ.ಸುನಿಲ್ಕುಮಾರ್ .ಈಗ ಚುನಾವಣೆ ನಡೆದರೆ ಬಿಜೆಪಿ 140 ಸ್ಥಾನ ಗೆಲ್ಲಲಿದೆ: ಯತ್ನಾಳ.ನಿಲ್ಲದ ಬಿಜೆಪಿ ಒಳ ಜಗಳ: ಯತ್ನಾಳ– ವಿಜಯೇಂದ್ರ ಬಣ ಸೆಣಸಾಟ.ಮೂಲ ಕಾಂಗ್ರೆಸ್ನವರಿಂದ ಸಿದ್ದರಾಮಯ್ಯ ಬಲಿಪಶು: ಬಸನಗೌಡ ಪಾಟೀಲ ಯತ್ನಾಳ.ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ.ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯ ಪಟಾಲಂ ಸಂಚು: HDK ಆರೋಪ.ನಾನು ಹಿಟ್ ಅಂಡ್ ರನ್ ಆದ್ರೆ ಸಿದ್ದರಾಮಯ್ಯ ಅವರೇನು U-ಟರ್ನಾ: ಎಚ್ಡಿಕೆ ಲೇವಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.