ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Dharwad Krishi Mela | ಕಡಲೆ ಸಸ್ಯದ ಕುಡಿ ಚಿವುಟಲು ಸೌರಚಾಲಿತ ಯಂತ್ರ

ಕೃಷಿ ಮೇಳದ ಸ್ಟಾರ್ಟ್‌ ಅಪ್‌ ಪೆವಿಲಿಯನ್‌ನಲ್ಲಿ ಪ್ರದರ್ಶನ
Published : 23 ಸೆಪ್ಟೆಂಬರ್ 2024, 5:11 IST
Last Updated : 23 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments

ಧಾರವಾಡ: ಕಡಲೆ ಸಸ್ಯದ ಕುಡಿ ಚಿವುಟಲು ಸೌರಚಾಲಿತ ಯಂತ್ರವನ್ನು ಸಿದ್ಧಪಡಿಸಿ ಮೇಳದಲ್ಲಿ ಪ್ರದರ್ಶಿಸಲಾಗಿದೆ. ಆರ್‌ಕೆವಿವೈ ಇನ್ನೊವೆಷನ್‌ ಮತ್ತು ಅಗ್ರಿಪ್ರಿನಿಯ್ಯುಯರ್‌ಶಿಪ್‌ ಕಾರ್ಯಕ್ರಮದ ನೆರವು ಪಡೆದು ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಕೊರವಾರ ಗ್ರಾಮದ ಗಿರೀಶ ಭದ್ರಕೊಂಡ ಅವರು ಯಂತ್ರವನ್ನು ಸಿದ್ಧಪಡಿಸಿದ್ಧಾರೆ. ಈ ಸ್ಟಾರ್ಟ್‌ ಅಪ್‌ ಯೋಜನೆಗೆ ಮೊದಲ ಹಂತದಲ್ಲಿ ₹ 5 ಲಕ್ಷ ಪಡೆದಿದ್ಧಾರೆ. ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸಜ್ಜುಗೊಳಿಸಿರುವ ‘ಸ್ಟಾರ್ಟ್‌ ಅಪ್‌ ಪೆವಿಲಿಯನ್‌’ನಲ್ಲಿ ಈ ಯಂತ್ರ ಪ್ರದರ್ಶಿಸಲಾಗಿದೆ.

‘ಕಡಲೆ ಬಿತ್ತನೆ ಮಾಡಿದ 30 ದಿನಗಳ ನಂತರ ಸಸ್ಯಗಳ ಕುಡಿ ಚಿವುಟಬೇಕು. ಕುಡಿಗಳನ್ನು ಚಿವುಟುವುದರಿಂದು ಹೆಚ್ಚು ಕವಲು ಒಡೆಯುತ್ತವೆ. ಇದರಿಂದ ಶೇ 15 ರಷ್ಟು ಅಧಿಕ ಇಳುವರಿ ಪಡೆಯಬಹುದು’ ಎಂದು ಗಿರೀಶ ಭದ್ರಕೊಂಡ ತಿಳಿಸಿದರು.

ಗಾಲಿ ಅಳವಡಿತ ಈ ಯಂತ್ರ ಬಳಕೆ ಸರಳವಾಗಿದೆ. ತಳ್ಳಲು ಹಿಡಿಕೆ ವ್ಯವಸ್ಥೆ ಇದೆ. ಒಂದು ಸಾಲಿನ ಯಂತ್ರ ಮತ್ತು ಮೂರು ಸಾಲಿನ ಯಂತ್ರಗಳು ಇವೆ. ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ಧಾರವಾಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೆವಿಕೆಗಳಿಗೆ ಈ ಯಂತ್ರಗಳನ್ನು ಒದಗಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಬಹಳಷ್ಟು ಕಡೆ ಹಿಂಗಾರಿನಲ್ಲಿ ಕಡಲೆ ಬೆಳೆಯಲಾಗುತ್ತದೆ.

‘ಸೌರ ಚಾಲಿತ ಯಂತ್ರ ಇದು. ಯಂತ್ರದ ತುದಿಯಲ್ಲಿ ಬ್ಲೇಡ್‌ಗಳನ್ನು ಅಳವಡಿಸಲಾಗಿರುತ್ತದೆ. ಒಂದು ಸಾಲಿನ ಯಂತ್ರದಲ್ಲಿ ದಿನಕ್ಕೆ ಮೂರು ಎಕರೆ ಕುಡಿ ಚಿವುಟಬಹುದು ಸೌರಶಕ್ತಿಯಿಂದ ಅವು ಕಾರ್ಯನಿರ್ವಹಿಸುತ್ತವೆ. ಕುಡಿ ಚಿವುಟಿದ ನಂತರ ಕುಡಿ ಸೊಪ್ಪು ಯಂತ್ರದಲ್ಲಿ ಸಂಗ್ರಹ‌ವಾಗುತ್ತದೆ. ಕುಡಿ ಸೊಪ್ಪಿನಿಂದ ಪಲ್ಲೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಕುಡಿ ಸೊಪ್ಪನ್ನು ಮಾರಾಟ ಮಾಡಬಹುದು. ಈ ಸೊಪ್ಪಿಗೆ ಕೆ.ಜಿ.ಗೆ ₹ 100ವರೆಗೆ ದರ ಇದೆ. ಗ್ರಾಹಕರಲ್ಲಿ ‘ಪವರ್‌ ಬ್ಯಾಂಕ್‌’ ಇದ್ಗರೆ ಈ ಯಂತ್ರದಿಂದ ಸೋಲಾರ್‌ ಪ್ಯಾನಲ್‌ನಿಂದ ಬಳಸಿ ದೀಪಗಳನ್ನು ಬೆಳಗಿಸಬಹುದು. ’ ಎಂದು ಗಿರೀಶ ಭದ್ರಕೊಂಡ ತಿಳಿಸಿದರು.

ಗಿರೀಶ ಭದ್ರಕೊಂಡ ಅವರು ಸ್ಟಾರ್ಟ್‌ ಅಪ್‌ ಯೋಜನೆ ಪ್ರಯೋಜನ ಪಡೆದು ಯಂತ್ರ ಸಿದ್ಧಪಡಿಸಿದ್ಧಾರೆ. ಅವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕಡಲೆ ಕುಡಿ ಕತ್ತರಿಸ‌ಲು ಹಲವು ರೈತರು ಬಳಕೆ ಮಾಡಿಕೊಂಡಿದ್ದಾರೆ.
-ಪ್ರೊ.ಎಸ್‌.ಎಸ್‌. ಡೊಳ್ಳಿ ಆರ್‌ವಿಕೆವೈ ಯೋಜನೆ ಅನುಷ್ಠಾನಾಧಿಕಾರಿ ಕೃಷಿ ವಿ.ವಿ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT