ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

Published : 21 ಅಕ್ಟೋಬರ್ 2024, 6:14 IST
Last Updated : 21 ಅಕ್ಟೋಬರ್ 2024, 6:14 IST
ಫಾಲೋ ಮಾಡಿ
Comments
ಧಾರವಾಡದ ಕಡಪಾ ಮೈದಾನದ ಕಲಾ ಭವನದ ಮೆಟ್ಟಿಲುಗಳ ಮೇಲೆ ನಾಯಿಗಳು
ಧಾರವಾಡದ ಕಡಪಾ ಮೈದಾನದ ಕಲಾ ಭವನದ ಮೆಟ್ಟಿಲುಗಳ ಮೇಲೆ ನಾಯಿಗಳು
ಧಾರವಾಡದ ಕಲಾ ಭವನದ ಮುಂಭಾಗದ ಆವರಣದಲ್ಲಿ ನಿಂತಿರುವ ಕಸ ಸಂಗ್ರಹ ವಾಹನಗಳು
ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ
ಧಾರವಾಡದ ಕಲಾ ಭವನದ ಮುಂಭಾಗದ ಆವರಣದಲ್ಲಿ ನಿಂತಿರುವ ಕಸ ಸಂಗ್ರಹ ವಾಹನಗಳು ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ
ಕಲಾ ಭವನ ಕಾಯಕಲ್ಪಕ್ಕೆ ₹ 70 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿ ಕಾರ್ಯಾದೇಶವನ್ನು ಶೀಘ್ರದಲ್ಲಿ ನೀಡಲಾಗುವುದು. ಬೇಂದ್ರೆ ಉದ್ಯಾನದಲ್ಲಿನ ಬಯಲು ರಂಗಮಂದಿರ ಪ್ರದೇಶದ ಅವ್ಯವಸ್ಥೆ ಸರಿಪಡಿಸಲು ಕ್ರಮ ವಹಿಸಲಾಗುವುದು.
ಡಾ.ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಧಾರವಾಡದಲ್ಲಿ ನಾಟಕ ಪ್ರದರ್ಶನಕ್ಕೆ ರಂಗಮಂದಿರ ಬಾಡಿಗೆ ( ₹ 15 ಸಾವಿರದಿಂದ ₹ 20 ಸಾವಿರ) ದುಬಾರಿ ಇದೆ. ಸರ್ಕಾರವು ಸುಸಜ್ಜಿತ ಜಿಲ್ಲಾ ರಂಗಮಂದಿರವೊಂದನ್ನು ನಿರ್ಮಿಸಿ ಕಡಿಮೆ ಬಾಡಿಗೆ ನಿಗದಿಪಡಿ‌ಸಿದರೆ ನಾಟಕ ತಂಡಗಳಿಗೆ ಅನುಕೂಲವಾಗುತ್ತದೆ.
ಮಹದೇವ ಹಡಪದ ರಂಗಕರ್ಮಿ ಧಾರವಾಡ
ಸರ್ಕಾರವು ಕಲಾವಿದರನ್ನು ಗುರುತಿಸಿ ಮಾಸಿಕ ನೆರವು ನೀಡಬೇಕು. ಕೋವಿಡ್‌ ನಂತರ ಬಹಳಷ್ಟು ರಂಗಸಂಸ್ಥೆಗಳು ನಿಷ್ಕ್ರಿಯವಾಗಿವೆ. ಈ ರಂಗಸಂಸ್ಥೆಗಳನ್ನು ಸಕ್ರಿಯಗೊಳಿಸಿ ನಾಟಕ ಪ್ರದರ್ಶನಗಳನ್ನು ಹೆಚ್ಚು ಆಯೋಜಿಸಬೇಕು.
ಗೋಪಾಲ ಯಲ್ಲಪ್ಪ ಉಣಕಲ್‌ ಕಲಾವಿದ ಧಾರವಾಡ
‘ಬಯಲು ರಂಗಮಂದಿರ ರಂಗಾಯಣಕ್ಕೇ ಹಸ್ತಾಂತರಿಸಿ’
‘ಮಹನಾನಗರ ಪಾಲಿಕೆಯವರು ಬಯಲು ರಂಗಮಂದಿರ ಜಾಗವನ್ನು ರಂಗಾಯಣಕ್ಕೇ ಹಸ್ತಾಂತರಿಸಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರ ಆ ಜಾಗವನ್ನು ರಂಗಾಯಣಕ್ಕೆ ನೀಡಿದರೆ ಅತ್ಯಾಧುನಿಕ ವ್ಯವಸ್ಥೆಗಳನ್ನು (ಬೆಳಕು ಧ್ವನಿವರ್ಧಕ ಕಾಲರ್‌ ಮೈಕ್‌...) ಕಲ್ಪಿಸಿ ಸುಸಜ್ಜಿತಗೊಳಿಸಿ ನಿಯಮಿತವಾಗಿ ನಾಟಕ ಪ್ರದರ್ಶನ ಆಯೋಜಿಸಲಾಗುವುದು. ರಂಗಾಯಣಕ್ಕೆ ವಾರ್ಷಿಕ ₹ 50 ಲಕ್ಷ ಅನುದಾನ ನೀಡುತ್ತಿದೆ. ಇಲ್ಲಿನ ನೌಕರರ ಸಂಬಳಕ್ಕೆ ₹ 59 ಲಕ್ಷ ‌ಬೇಕು. ಈ ಸಂಸ್ಥೆಗೆ ಸ್ವಂತ ಆದಾಯ ಇಲ್ಲ. ಈ ಕ್ಷೇತ್ರಕ್ಕೆ ಸಿಎಸ್‌ಆರ್‌ (ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ) ನಿಧಿ ನೀಡಲು ಕಂಪನಿಗಳು ಆಸಕ್ತಿ ತೋರಲ್ಲ. ಸರ್ಕಾರವು ರಂಗಾಯಣಕ್ಕೆ ಅನುದಾನವನ್ನು ₹ 2 ಕೋಟಿಗೆ ಹೆಚ್ಚಿಸಬೇಕು. ರಂಗಭೂಮಿ ಚಟುವಟಿಕೆಗಳಿಗೆ ಅನುದಾನ ಒದಗಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು’ ಎಂದು ಮನವಿ ಮಾಡಿದರು.
ಸುಸಜ್ಜಿತ ‘ಮಂದಿರ’ ಕೊರತೆ
ಹುಬ್ಬಳ್ಳಿ: ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಧಾರವಾಡದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದರೂ ಹುಬ್ಬಳ್ಳಿಯಲ್ಲಿ ಸುಸಜ್ಜಿತ ರಂಗಮಂದಿರದ ಕೊರತೆ ಇದೆ. ಇದು ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಹುಬ್ಬಳ್ಳಿಯನ್ನು ಬಹುತೇಕ ದೂರವಾಗಿಸಿದೆ. ನಗರದ ಸವಾಯಿ ಗಂಧರ್ವ ಕಲಾಮಂದಿರ ಸಾಂಸ್ಕೃತಿಕ ಭವನ ಕನ್ನಡ ಭವನ ಹಾಗೂ ಟೌನ್‍ಹಾಲ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧೀನದಲ್ಲಿವೆ. ಸಾಂಸ್ಕೃತಿಕ ಭವನ ಹಾಗೂ ಟೌನ್‍ಹಾಲ್‍ ದುರಸ್ತಿಯಲ್ಲಿವೆ. ಸವಾಯಿ ಗಂಧರ್ವ ಕಲಾಮಂದಿರ ಹೊತುಪಡಿಸಿ ಉಳಿದೆಡೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದು ತೀರಾ ವಿರಳವಾಗಿದೆ. ಈ ಕಾರಣದಿಂದಲೇ ಯಾವುದೇ ಕಾರ್ಯಕ್ರಮ ಆಯೋಜಿಸಲು ಖಾಸಗಿ ಸಮುದಾಯ ಭವನಗಳನ್ನು ಆಶ್ರಯಿಸುವಂತಾಗಿದೆ. ‘ಸವಾಯಿ ಗಂಧರ್ವ ಹಾಲ್‍ಗೆ ದಿನದ ಬಾಡಿಗೆಯಾಗಿ ₹10 ಸಾವಿರ ಪಡೆಯುತ್ತಾರೆ. ಉಳಿದೆಡೆ ಸರಿಯಾದ ವ್ಯವಸ್ಥೆ ಇಲ್ಲ. ಹೆಚ್ಚು ಕಾರ್ಯಕ್ರಮಗಳು ನಡೆಯುತ್ತಿದ್ದ ಟೌನ್‍ಹಾಲ್‍ ದುರಸ್ತಿಯಲ್ಲಿದೆ. ಕಾರ್ಯಕ್ರಮಗಳನ್ನು ಆಯೋಜಿಸುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಭವನಗಳಿಗೇ ಹೆಚ್ಚಿನ ದರ ನೀಡುವುದು ಹೊರೆಯಾಗಿದೆ. ಹಾಗಾಗಿ ಬಹುತೇಕರು ಅಲ್ಲಲ್ಲಿ ಇರುವ ಸಮುದಾಯ ಭವನಗಳಲ್ಲೇ ಕಾರ್ಯಕ್ರಮ ಆಯೋಜಿಸುತ್ತಾರೆ’ ಎನ್ನುತ್ತಾರೆ ಜಾನಪದ ತಜ್ಞ ರಾಮು ಮೂಲಗಿ. ‘ಸವಾಯಿ ಗಂಧರ್ವ ಹಾಲ್‍ನಲ್ಲಿ ಬೆಳಕು ಶಬ್ದದ ವ್ಯವಸ್ಥೆ ತಕ್ಕಮಟ್ಟಿದೆ. ಸಾಂಸ್ಕೃತಿಕ ಭವನ ಗೋದಾಮಿನಂತಾಗಿದೆ. ಕನ್ನಡ ಭವನ ದೂರದಲ್ಲಿದೆ. ಬೆಳಕು ಶಬ್ದದ ವ್ಯವಸ್ಥೆ ತಂತ್ರಜ್ಞರನ್ನು ನಿಯೋಜಿಸುವ ಕೆಲಸವಾಗಿಲ್ಲ. ಸಾಂಸ್ಕೃತಿಕ ಆಲೋಚನೆ ಅನುಭವ ಇರುವವರನ್ನು ಭವನಗಳ ನಿರ್ವಹಣೆಗೆ ನಿಯೋಜಿಸಬೇಕಿದೆ. ದಿನಕ್ಕೆ ದುಬಾರಿ ದರ ಪಡೆಯುವ ಬದಲು ಕಡಿಮೆ ದರ ನಿಗದಿಪಡಿಸಿದರೆ ವರ್ಷಪೂರ್ತಿ ಕಾರ್ಯಕ್ರಮ ನಡೆಯುತ್ತವೆ. ಸಾಂಸ್ಕೃತಿಕ ಕೇಂದ್ರಗಳನ್ನು ನಡೆಸುವ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು’ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ತಿಳಿಸಿದರು.
‘ನಿರ್ವಹಣೆ; ಪಾಲಿಕೆ ಹೊಣೆ’
ಹುಬ್ಬಳ್ಳಿಯ ಸರ್ಕಾರಿ ಸಾಂಸ್ಕೃತಿಕ ಭವನಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರ್ಮಾಣ ಮಾಡಿ ನಿರ್ವಹಣೆಗಾಗಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಧಾರವಾಡದ ಆಲೂರು ವೆಂಕಟರಾವ ಸಭಾಂಗಣ ರಂಗಾಯಣ ಬೇಂದ್ರ ಭವನವನ್ನು ಇಲಾಖೆಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಸರ್ಕಾರದ ಹಾಗೂ ಇತರೆ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ವರ್ಷದಲ್ಲಿ 15 ದಿನ ಉಚಿತವಾಗಿ ಭವನಗಳನ್ನು ಬಾಡಿಗೆ ಕೊಡಲು ಅವಕಾಶವಿದೆ. ಕುಮಾರ ಬೆಕ್ಕೇರಿ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಅಗತ್ಯ ವ್ಯವಸ್ಥೆ: ಭರವಸೆ
ಸವಾಯಿ ಗಂಧರ್ವ ಹಾಲ್‍ ಅನ್ನು ಸಮಿತಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ . ಕನ್ನಡ ಭವನ ಸಾಂಸ್ಕೃತಿಕ ಭವನವನ್ನು ಕಾರ್ಯಕ್ರಮಕ್ಕೆ ಬಾಡಿಗೆ ಕೇಳಿದವರಿಗೆ ಕೊಡುತ್ತೇವೆ. ಸಾಂಸ್ಕೃತಿಕ ಭವನದ ದುರಸ್ತಿಗೆ ಟೆಂಡರ್‌ ಆಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಈ ಹಿಂದೆ ಅನುದಾನ ಬಾರದ ಕಾರಣಕ್ಕೆ ಟೌನ್‍ಹಾಲ್ ದುರಸ್ತಿ ತಡವಾಗಿದೆ. ಎಲ್ಲ ಭವನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು-ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT