ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ: ಯೋಜನೆಗಳ ಕಳಪೆ ಕಾಮಗಾರಿ; ಸಾರ್ವಜನಿಕರ ಆಕ್ಷೇಪ

Published : 29 ಜುಲೈ 2024, 5:00 IST
Last Updated : 29 ಜುಲೈ 2024, 5:00 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ವಾಹನಗಳ ನಿಲುಗಡೆಗೆ  ನಿರ್ಮಿಸಿರುವ ಫಜಲ್ ಪಾರ್ಕಿಂಗ್ ವ್ಯವಸ್ಥೆ ಖಾಲಿ ಇರುವುದು
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ವಾಹನಗಳ ನಿಲುಗಡೆಗೆ  ನಿರ್ಮಿಸಿರುವ ಫಜಲ್ ಪಾರ್ಕಿಂಗ್ ವ್ಯವಸ್ಥೆ ಖಾಲಿ ಇರುವುದು
ಅಭಿವೃದ್ಧಿಯ ನಂತರವೂ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣ ಕೆಸರು ಗದ್ದೆಯಂತಾಗಿದೆ
ಅಭಿವೃದ್ಧಿಯ ನಂತರವೂ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣ ಕೆಸರು ಗದ್ದೆಯಂತಾಗಿದೆ
ಬಾಕಿ ಇರುವ ಕಾಮಗಾರಿಗಳು ಯೋಜನೆಗಳು; ಮೊತ್ತ ಉಣಕಲ್‌ ಕೆರೆ ಎರಡನೇ ಹಂತ; ₹36.59 ಕೋಟಿ ಹಳೆ ಬಸ್‌ ನಿಲ್ದಾಣ; ₹39.63 ಕೋಟಿ ಕ್ರೀಡಾ ಸಂಕೀರ್ಣ;  ₹160 ಕೋಟಿ
ಮೂರನೇ ತಂಡದಿಂದ ಪರಿಶೀಲನೆಯಾದ ನಂತರ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳುವಾಗ ಸಮರ್ಪಕ ಪರಿಶೀಲನೆ ಆಗಬೇಕು. ಇಲ್ಲದಿದ್ದರೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತದೆ.
–ಪಾಂಡುರಂಗ ಪಾಟೀಲ ಮಾಜಿ ಮೇಯರ್‌
ಕಾಮಗಾರಿಗಳಲ್ಲಿ ಲೋಪವಾಗಿದ್ದರೆ ಡೀಮ್ಡ್‌ ಹಸ್ತಾಂತರ ಮಾಡಿಕೊಳ್ಳಲು ಬರುವುದಿಲ್ಲ. ಯೋಜನೆಯಡಿ 1 ಸಾವಿರ ಕೋಟಿಯನ್ನು ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ರೀತಿ ಮಾಡಲಾಗಿದೆ
–ಈರೇಶ ಅಂಚಟಗೇರಿ ಸದಸ್ಯ ಮಹಾನಗರ ಪಾಲಿಕೆ
ಕೆಲ ಕಾಮಗಾರಿಗಳು ಮೂರು–ನಾಲ್ಕು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದು ನಿರ್ವಹಣೆ ಇಲ್ಲದೆ ಹಾಳಾಗಿವೆ. ಅವುಗಳನ್ನು ಸರಿಪಡಿಸಿ ಹಸ್ತಾಂತರಿಸಲು ಸ್ಮಾರ್ಟ್ ಸಿಟಿಯವರಿಗೆ ಸೂಚಿಸಲಾಗಿದೆ.
–ಈಶ್ವರ ಉಳ್ಳಾಗಡ್ಡಿ ಆಯುಕ್ತ ಮಹಾನಗರ ಪಾಲಿಕೆ
ನಿರ್ವಹಣೆ ಹಣ; ‍‍ಪಾಲಿಕೆಗೆ ಹಸ್ತಾಂತರ
‘ಒಟ್ಟು ಕಾಮಗಾರಿಗಳಲ್ಲಿ 43 ಕಾಮಗಾರಿಗಳು ಹಸ್ತಾಂತರವಾಗಿವೆ. ಉಳಿದ ಕಾಮಗಾರಿಗಳು ಹಸ್ತಾಂತರವಾಗಬೇಕಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ. ಉಳಿದ ಕಾಮಗಾರಿಗಳನ್ನು ಶೀಘ್ರ ಹಸ್ತಾಂತರ ಮಾಡಲಾಗುವುದು’  ಎಂದು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಘಾಳಿ ತಿಳಿಸಿದರು. ‘ಆಗಸ್ಟ್‌ ವೇಳೆಗೆ ಹಳೆ ಬಸ್ ನಿಲ್ದಣ ಕಾಮಗಾರಿ ಪೂರ್ಣಗೊಳ್ಳಲಿದೆ. ಡಿಸೆಂಬರ್‌ ವೇಳೆಗೆ ಕ್ರೀಡಾ ಸಂಕೀರ್ಣ ಕಾಮಗಾರಿ ಮುಗಿಯಲಿದೆ. ಕೆಲ ಕಾಮಗಾರಿಗಳು ಪೂರ್ಣಗೊಂಡು ಮೂರ್ನಾಲ್ಕು ವರ್ಷಗಳಾಗಿವೆ. ಪ್ರತಿ ಕಾಮಗಾರಿ ನಿರ್ವಹಣೆಗೂ ಪ್ರತ್ಯೇಕ ಹಣ ಇದ್ದು ಅದನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು’ ಎಂದರು.
ಸಮಿತಿಗೆ ಮಾಹಿತಿ ನೀಡದ ಸ್ಮಾರ್ಟ್ ಸಿಟಿ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಮಹಾನಗರ ಪಾಲಿಕೆಯ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳುವ ಮುನ್ನ ಪರಿಶೀಲಿಸಿ ತಾಂತ್ರಿಕ ಪರಿಶೀಲನಾ ವರದಿ ಸಲ್ಲಿಸಲು ಈರೇಶ ಅಂಚಟಗೇರಿ ಅವರು ಮೇಯರ್ ಆಗಿದ್ದಾಗ ಪಾಲಿಕೆಯಿಂದ ಸಮಿತಿ ರಚಿಸಲಾಗಿತ್ತು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಮನೋಜಕುಮಾರ ಚಿತವಾಡಗಿ (ಅಧ್ಯಕ್ಷ) ಡಾ.ಜಗದೀಶ ಪೂಜಾರಿ ಶ್ರೀಶೈಲ ಯಕ್ಕುಂಡಿಮಠ (ಸದಸ್ಯರು) ಅವರನ್ನು ಸಮಿತಿಗೆ ನೇಮಕ ಮಾಡಲಾಗಿತ್ತು. ‘ಸಮಿತಿಯಿಂದ ಮೂರ್ನಾಲ್ಕು ಬಾರಿ ಸಭೆ ನಡೆಸಿದರೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಯಾವುದೇ ಮಾಹಿತಿ ಒದಗಿಸಲಿಲ್ಲ. ಸಭೆಗೆ ಹಾಜರಾಗಲಿಲ್ಲ. ಹೀಗಾಗಿ ಯಾವುದೇ ಕಾಮಗಾರಿಗಳ ಪರಿಶೀಲನೆ ನಡೆಸಲು ಸಾಧ್ಯವಾಗದ ಕಾರಣ ವರದಿ ಸಲ್ಲಿಸಿಲ್ಲ’  ಎಂದು ಸದಸ್ಯರಾಗಿದ್ದ ಶ್ರೀಶೈಲ ಯಕ್ಕುಂಡಿಮಠ ತಿಳಿಸಿದರು.  
ಸ್ಮಾರ್ಟ್ ಸ್ಕೂಲ್ ಹಣ ನಾಲಾ ಅಭಿವೃದ್ಧಿಗೆ
ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಾಲೆಗಳ ಉನ್ನತೀಕರಣಕ್ಕೆ ಮೀಸಲಿಟ್ಟಿದ್ದ  ಅನುದಾನವನ್ನು ನಾಲಾ ರಸ್ತೆ ಕಾಮಗಾರಿಗೆ ಬಳಸಲಾಗುತ್ತಿದೆ. ಸ್ಮಾರ್ಟ್‌ ಸ್ಕೂಲ್ ಯೋಜನೆ ಅಡಿ ಶಾಲೆಗಳ ಉನ್ನತೀಕರಣಕ್ಕೆ 5 ಕೋಟಿ ಮೊತ್ತದ ಡಿಪಿಆರ್ ಮಾಡಲಾಗಿತ್ತು. ಅದನ್ನು ರದ್ದುಪಡಿಸಿ ಒಟ್ಟು ₹13 ಕೋಟಿಯಲ್ಲಿ ವಾರ್ಡ್ 78ರ ಈಶ್ವರ ನಗರ ಮತ್ತು ವಾರ್ಡ್‌ 73ರ ಹಣಪಿ ಟೌನ್‌ನಲ್ಲಿ  ಸಿಸಿ ರಸ್ತೆ ನಾಲಾಗೆ ಆರ್‌ಸಿಸಿ ಗೋಡೆ ಚರಂಡಿ ನಿರ್ಮಾಣಕ್ಕೆ ಬಳಸಿಕೊಳ್ಳಲು ಸ್ಮಾರ್ಟ್ ಸಿಟಿ ಮಿಷನ್‌ನ ಹೈ ಪವರ್ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT