ಹುಬ್ಬಳ್ಳಿಯ ಹೊಸ ಮ್ಯಾದರ ಓಣಿಯಲ್ಲಿರುವ ಸಾರ್ವಜನಿಕ ಶೌಚಾಯಲ ಬಂದ್ ಆಗಿದ್ದು ಗಿಡಗಂಟಿ ಬೆಳೆದು ಪಾಳು ಬಿದ್ದಿದೆ ಪ್ರಜಾವಾಣಿ ಚಿತ್ರ/ಗುರು ಹಬೀಬ
ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಲು ಮಹಾನಗರ ಪಾಲಿಕೆ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ
ಸುನೀತಾ ಬುರಬುರೆ ಸದಸ್ಯರು ಹು–ಧಾ ಮಹಾನಗರ ಪಾಲಿಕೆ
ಶೌಚಾಲಯ ಬೇಗನೇ ನಿರ್ಮಿಸಿ
ಮನೆಯಲ್ಲಿ ಹೆಣ್ಣುಮಕ್ಕಳು ಮಾತ್ರ ಇದ್ದೇವೆ. ಶೌಚಕ್ಕೆ ಸಾರ್ವಜನಿಕ ಶೌಚಾಲಯಕ್ಕೇ ಹೋಗುತ್ತಿದ್ದೆವು. ಅದು ಬಂದ್ ಆದ ನಂತರ ಬಹಳ ಕಷ್ಟವಾಗಿದೆ. ಅಕ್ಕಪಕ್ಕದ ಮನೆಗಳಲ್ಲಿ ಮನವಿ ಮಾಡಿ ಹೋಗುವ ಸ್ಥಿತಿ ಬಂದಿದೆ. ಬೇಗನೇ ಶೌಚಾಲಯ ನಿರ್ಮಿಸಿಕೊಟ್ಟರೆ ಉಪಕಾರವಾಗುತ್ತದೆ ಎಂದು ಹೊಸ ಮ್ಯಾದರ ಓಣಿಯ ಈರಮ್ಮ ಸೌದಾಗರ್ ತಿಳಿಸಿದರು. ಬಯಲು ಶೌಚಾಲಯಕ್ಕೆ ದಾರಿ ಈ ಭಾಗದಲ್ಲಿ ಇರುವವೆಲ್ಲ ಸಣ್ಣ–ಸಣ್ಣ ಮನೆಗಳು. ಬಹಳ ಕಡೆ ಶೌಚಾಲಯ ವ್ಯವಸ್ಥೆ ಇಲ್ಲ. ನಿರ್ಮಿಸಲು ಜಾಗವೂ ಇಲ್ಲ. ಶೌಚಕ್ಕಾಗಿ ಸಾರ್ವಜನಿಕ ಶೌಚಾಲಯವನ್ನೇ ಹಲವರು ಅವಲಂಬಿಸಿದ್ದರು. ಅದೂ ಬಂದ್ ಆದ ನಂತರ ಹಲವರು ಇಲ್ಲಿಂದ ಮನೆ ಬಿಟ್ಟು ಬೇರೆಡೆ ವಲಸೆ ಹೋಗಿದ್ದಾರೆ. ಉಳಿದವರು ಬಯಲು ಶೌಚಾಲಯಕ್ಕೋ ಅಕ್ಕಪಕ್ಕದ ಮನೆಗಳಿಗೋ ಹೋಗುವುದು ಅನಿವಾರ್ಯವಾಗಿದೆ ಎಂದು ವಿಜಯಲಕ್ಷ್ಮಿ ಹಜಾರೆ ಬೇಸರ ವ್ಯಕ್ತಪಡಿಸಿದರು.
ಶೌಚಾಲಯ ತೆರೆಯಲು ಕ್ರಮ
ಸಾರ್ವಜನಿಕ ಶೌಚಾಲಯದಲ್ಲಿ ಪೈಪ್ಲೈನ್ ಹಾಳಾಗಿದ್ದ ಕಾರಣ ಅದರ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರು ಬಂದ್ ಮಾಡಿದ್ದರು. ಇಂದು ಅದನ್ನು ಪರಿಶೀಲಿಸಿದ್ದು ಶೀಘ್ರದಲ್ಲಿ ದುರಸ್ತಿ ಮಾಡಿಸಿ ಮತ್ತೆ ತೆರೆಯುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಕೆಲವೇ ದಿನಗಳಲ್ಲಿ ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿ ಕೊಡಲಾಗುತ್ತದೆ. ಆದರೆ ಸ್ಥಳೀಯರು ಅಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ. ಕಿಡಿಗೇಡಿಗಳು ಮದ್ಯದ ಬಾಟಲ್ಗಳನ್ನೆಲ್ಲ ಹಾಕಿ ಹೊಲಸು ಮಾಡಿದ್ದಾರೆ. ಹೀಗಾದರೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. – ಕೆ.ಎಸ್. ಕಟಗಿ ಆಯುಕ್ತರು 9ನೇ ವಲಯ ಮಹಾನಗರ ಪಾಲಿಕೆ