ಲಕ್ಷ್ಮೇಶ್ವರ: ಕೃಷಿ ವಲಯದಲ್ಲಿ ಕೆಂಪು ಬಂಗಾರ ಎಂದೇ ಪರಿಗಣಿಸಲಾಗಿರುವ ಪ್ರಮುಖ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು ಇಳುವರಿ ಕುಂಠಿತ ಆಗುವ ಆತಂಕ ರೈತರನ್ನು ಕಾಡುತ್ತಿದೆ.

ಮೆಣಸಿನಕಾಯಿ ರೈತರಿಗೆ ಕೈ ತುಂಬಾ ಹಣ ತಂದು ಕೊಡುವ ಪ್ರಮುಖ ಬೆಳೆಯಾಗಿದೆ. ಪ್ರತಿ ವರ್ಷ ತಪ್ಪದೇ ಇದನ್ನು ಬೆಳೆಯಲಾಗುತ್ತಿದೆ. ಹದವರಿತು ಮಳೆಯಾದರೆ ಇದು ರೈತನ ದೊಡ್ಡ ದೊಡ್ಡ ಖರ್ಚು ವೆಚ್ಚಗಳನ್ನು ನೀಗಿಸುತ್ತದೆ. ಮೆಣಸಿನಕಾಯಿ ಬೆಳೆಯನ್ನೇ ನೆಚ್ಚಿಕೊಂಡು ಈ ಭಾಗದ ರೈತರು ಮಕ್ಕಳ ಮದುವೆ ಮಾಡುವ, ಮನೆ ಕಟ್ಟುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಈ ಬಾರಿ ಅವರ ಆಸೆಯನ್ನು ಬೆಳೆಗಳಿಗೆ ಬಂದಿರುವ ರೋಗಗಳು ನುಚ್ಚುನೂರು ಮಾಡಿವೆ.

ಲಕ್ಷ್ಮೇಶ್ವರ ಸೇರಿದಂತೆ ತಾಲ್ಲೂಕಿನ ಬಸಾಪುರ, ರಾಮಗಿರಿ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜನೂರು, ಬಟ್ಟೂರು, ಪುಟಗಾಂಬಡ್ನಿ, ಅಡರಕಟ್ಟಿ, ದೊಡ್ಡೂರು, ಗೋವನಾಳ, ಶಿಗ್ಲಿ ಗ್ರಾಮಗಳ ಕಪ್ಪು ಅಥವಾ ಎರೆ ಭೂಮಿಯಲ್ಲಿ ಮೆಣಸಿನಕಾಯಿ ಚೆನ್ನಾಗಿ ಬೆಳೆಯುತ್ತದೆ. ಈ ಬಾರಿ ಎರಡು ಸಾವಿರ ಹೆಕ್ಟೇರ್ನಲ್ಲಿ ಮೆಣಸಿನಕಾಯಿ ಬಿತ್ತನೆ ಆಗಿದೆ. ಇದೊಂದು ಚಳಿ ಆಧಾರಿತ ಬೆಳೆಯಾಗಿದ್ದು ಹೆಚ್ಚಿನ ಮಳೆಯಾದರೆ ಕೊಳೆಯುತ್ತದೆ. ಇಲ್ಲವೇ ರೋಗಕ್ಕೆ ತುತ್ತಾಗುತ್ತದೆ. ಪ್ರಸ್ತುತ ವರ್ಷದ ಅತಿವೃಷ್ಟಿಯಿಂದಾಗಿ ಬೆಳೆ ರೋಗಕ್ಕೆ ತುತ್ತಾಗಿದೆ. ಕೊಯ್ಲಿಗೆ ಬರುವ ಮುನ್ನವೇ ಬೆಳೆಯಲ್ಲಿ ಹತ್ತು ಹಲವು ರೋಗಗಳು ಕಾಣಿಸಿಕೊಂಡಿವೆ. ಇದು ಇಳುವರಿಯ ಮೇಲೆ ಹೊಡೆತ ಬೀಳುವುದನ್ನು ತೋರಿಸುತ್ತಿದೆ. ಮೆಣಸಿನಕಾಯಿ ಬೆಳೆಯಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು ಇದೀಗ ರೋಗ ಬಾಧೆ ಅವರನ್ನು ಹೌಹಾರಿಸಿದೆ.

ಆರಂಭದಲ್ಲಿ ಉತ್ತಮ ತೇವಾಂಶದಿಂದಾಗಿ ಬೆಳೆ ಚೆನ್ನಾಗಿತ್ತು. ಆದರೆ ಆಗಾಗ ಸುರಿದ ಮಳೆಯು ಬೆಳೆಗೆ ರೋಗ ತಂದಿದೆ. ಎಲೆ ಚುಕ್ಕಿ ಮತ್ತು ಎಲೆ ಮುರುಟು ರೋಗಗಳು ಮೆಣಸಿನಕಾಯಿ ಬೆಳೆಯನ್ನು ಬಲಿ ತೆಗೆದುಕೊಳ್ಳುತ್ತಿವೆ. ಈ ರೋಗಗಳು ಬಂದರೆ ಗಿಡದ ಎಲೆಗಳಲ್ಲಿಯ ಪತ್ರ ಹರಿತ್ತು ಹಾಳಾಗಿ ಇಡೀ ಬೆಳೆಯೇ ನಾಶವಾಗುತ್ತದೆ.

‘ಮೆಣಸಿನಕಾಯಿ ಬೆಳೆ ರೋಗಕ್ಕೆ ತುತ್ತಾಗಿದ್ದು ಇಳುವರಿ ಸಾಕಷ್ಟು ಕುಂಠಿತಗೊಳ್ಳುವ ಭಯ ಇದೆ. ರೈತರು ಮೆಣಸಿನಕಾಯಿ ಬೆಳೆಗೆ ವಿಮೆ ಮಾಡಿಸಿದ್ದು ವಿಮಾ ಕಂತನ್ನು ತುಂಬಿದ್ದಾರೆ. ಕಾರಣ ರೈತರಿಗೆ ವಿಮೆ ಕಂಪನಿಯಿಂದ ವಿಮೆ ಪರಿಹಾರವನ್ನು ಕೊಡಿಸಬೇಕು’ ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೊಜನೂರು ಗ್ರಾಮದ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.

ರೋಗ ಹತೋಟಿಗೆ ಸಲಹೆ

‘ಅತಿವೃಷ್ಟಿಯಿಂದಾಗಿ ಮೆಣಸಿನಕಾಯಿ ಬೆಳೆಗೆ ಎಲೆ ಚುಕ್ಕಿ ಮತ್ತು ಎಲೆ ಮುರುಟು ರೋಗಗಳು ಗಂಟು ಬಿದ್ದಿವೆ. ಇವುಗಳ ಹತೋಟಿಗಾಗಿ 2 ಎಂಎಲ್ ಬೇವಿನೆಣ್ಣೆ ಅಥವಾ 2 ಎಂಎಲ್ ಡೈಮಿಟೋಯೇಟ್ ಕ್ರಿಮಿನಾಶಕವನ್ನು ಹತ್ತು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು’ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಹಾವರೆಡ್ಡಿ ರೈತರಿಗೆ ಸಲಹೆ ನೀಡಿದ್ದಾರೆ. ‘ಈಗಾಗಲೇ ಮೆಣಸಿನಕಾಯಿ ಹೊಲಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಸಲಹೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.