ಶಿರಹಟ್ಟಿ (ಗದಗ ಜಿಲ್ಲೆ): ಅನ್ಯಾಯವನ್ನು ತಡೆಗಟ್ಟಲು ಮನವಿ ಮಾಡಿದರೆ ಹೋರಾಟ ತಡೆಗಟ್ಟಲು ಮುಂದಾದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕೊಲೆ ಮಾಡಿದ್ದು ಒಂದೆಡೆಯಾದರೆ, ಆದೇಶಕ್ಕೆ ಪೂರ್ವದಲ್ಲಿಯೇ 144 ಸೆಕ್ಷನ್ ಜಾರಿ ಮಾಡಿದ ಪೊಲೀಸ್ ಇಲಾಖೆ ಸಂಪೂರ್ಣ ಮಾರಾಟವಾಗಿದೆ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ ಆರೋಪ ಮಾಡಿದರು.

ಸ್ಥಳೀಯ ಫಕೀರೇಶ್ವರ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿ ಅಯೋಜಿಸಿ ಮಾತನಾಡಿದ ಅವರು, ಮಠದ ಭಕ್ತರನ್ನು ಒಳಗೆ ಬಿಡದೆ ಪೊಲೀಸ್ ಸರ್ಪಗಾವಲು ಇಟ್ಟಿದ್ದು, ಅವರಿಗೆ ರಾತ್ರೋ ರಾತ್ರಿ ನೋಟಿಸ್ ನೀಡಿದ್ದು ನೋವಿನ ಸಂಗತಿ. ನಮ್ಮ ಇತಿಹಾಸದಲ್ಲಿ ಶಾಂತಿ ಕದಡುವ ಹೋರಾಟ ಮಾಡಿಲ್ಲ. ನಾವು ಹೋರಾಟ ಕೈಗೊಂಡಿದ್ದು ಗದಗದಲ್ಲಿ 144 ಸೆಕ್ಷನ್ ಜಾರಿ ಮಾಡುವುದನ್ನು ಬಿಟ್ಟು ಶಿರಹಟ್ಟಿಯಲ್ಲಿ ಮಾಡಿದ್ದು ಅಕ್ಷಮ್ಯ. ಈ ಮೂಲಕ ಇಲಾಖೆ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡದೆ ಮಲತಾಯಿ ಧೋರಣೆ ಅನುಸರಿದೆ ಎಂದು ಹರಿಹಾಯ್ದರು.

ಭಾವೈಕ್ಯತೆ ಅರ್ಹರಿರುವವರು ಮಾತ್ರ ಆ ಪದ ಬಳಕೆ ಮಾಡಬೇಕೆಂಬುದು ನಮ್ಮ ತಾತ್ವಿಕ ವಿಚಾರ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಒಂದು ತಜ್ಞರ ಸಮಿತಿ ರಚನೆ ಮಾಡಿ ಎರಡು ಮಠದ ಪರಂಪರೆ ಹಾಗೂ ಶ್ರೀಗಳ ಸಮಗ್ರ ಅಧ್ಯಯನ ಮಾಡಬೇಕಿತ್ತು. ಯಾವುದೋ ಪ್ರಭಾವಕ್ಕೆ ಒಳಗಾಗಿ ಒಂದು ಭವ್ಯ ಮಠದ ಪರಂಪರೆಯನ್ನು ಹಾಳು ಮಾಡಬಾರದು. ಸರ್ಕಾರ ಸತ್ಯಾ ಸತ್ಯಾತೆಯನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಹೋರಾಟ ನಿಲ್ಲಿಸುವ ಸಾಹಸ ಮಾಡಬಾರದು. ಮುಖ್ಯಮಂತ್ರಿಗಳು ಹೋರಾಟದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತೋಂಟದಾರ್ಯ ಮಠ ವಿರಕ್ತ ಮಠವೇ ಹೊರತು ಭಾವೈಕ್ಯತೆ ಮಠ ಅಲ್ಲ. ಆದಕಾರಣ, ಸದ್ಯ ನಮ್ಮ ಮೇಲೆ ಆಗುತ್ತಿರುವ ಅನ್ಯಾಯವನ್ನು ಮಾಧ್ಯಮದ ಮೂಲಕ ಅವರ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಕೊನೆಯುಸಿರುವ ತನಕ ಭಾವೈಕ್ಯತೆ ಹೋರಾಟವನ್ನು ನಿಲ್ಲಿಸುವುದಿಲ್ಲ. ಒಂದು ವಿರಕ್ತ ಮಠವನ್ನು ಭಾವೈಕ್ಯತೆ ಮಠ ಮಾಡುವುದು ಎರಡು ಮಠಕ್ಕೆ ಮಾಡುವ ಘೋರ ಅನ್ಯಾಯ. ಇಂತಹ ಜಾತಿವಾದಿ ಸ್ವಾಮಿಗಳಿಗೆ ಮಣೆ ಹಾಕುವ ಇಲಾಖೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
.ದಿಂಗಾಲೇಶ್ವರ ಶ್ರೀಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು ದಾಖಲು.ಲಂಚ ತೆಗೆದುಕೊಂಡವರು ರಶೀದಿ ಕೊಡುತ್ತಾರೆಯೇ?: ದಿಂಗಾಲೇಶ್ವರ ಶ್ರೀ ತಿರುಗೇಟು.ದಿಂಗಾಲೇಶ್ವರ ಶ್ರೀ ಹೇಳಿಕೆ ಶೋಭೆ ತರಲ್ಲ: ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ.ನಯಾಪೈಸೆ ಕೊಟ್ಟಿಲ್ಲ: ದಿಂಗಾಲೇಶ್ವರ ಶ್ರೀಗೆ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.