ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ನಲ್ಲಿ ಶ್ಲಾಘಿಸಿದ್ದ ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕಾವೆಂಶ್ರೀ ಅವರು ಶುಕ್ರವಾರ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು.

‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ಅವರು ಶ್ಲಾಘಿಸಿದ ವ್ಯಕ್ತಿಗಳೆಲ್ಲರನ್ನೂ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ನಮ್ಮನ್ನು ಭೇಟಿಯಾಗಿ ಆಪ್ತ ಸಂವಾದ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ನಮ್ಮ ದೇಶದ ಸಾಧಕರೆಲ್ಲರೂ ಸಂಸ್ಕೃತಿ, ಕಲೆ, ಪರಂಪರೆ ಪ್ರತೀಕವಾಗಿದ್ದಾರೆ. ನಿಮ್ಮ ಸಾಧನೆಗಳು ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು’ ಎಂದು ಕಾವೆಂಶ್ರೀ ತಿಳಿಸಿದ್ದಾರೆ.

ದೆಹಲಿ ದೂರದರ್ಶನದ ಸಿಇಒ ಗೌರವ್ ದ್ವಿವೇದಿ ಹಾಗೂ ಸಚಿವರು ಭಾಗವಹಿಸಿದ್ದರು. ಸ್ಥಳಿಯ ಕಲಾವಿದರಿಂದ ದೇಶ ಭಕ್ತಿ ಗೀತೆ ಕಾರ್ಯಕ್ರಮ ಜರುಗಿತು. ನಂತರ ‘ಮನ್ ಕೀ ಬಾತ್’ ಅತಿಥಿಗಳಿಗೆ ಉತ್ತರ ಭಾರತ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.