ನರಗುಂದ: ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಸೋಮವಾರ ರಾತ್ರಿ ಒಳ ಹರಿವು ಹೆಚ್ಚಾಗಿದ್ದು ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯ ಭರ್ತಿ ಹಂತಕ್ಕೆ ಬಂದಿದೆ. ಮಂಗಳವಾರ ನೀರಿನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ.

ಇದರಿಂದ ಭಾನುವಾರ, ಸೋಮವಾರ ಎರಡು ದಿನ ನೆರೆ ಆತಂಕದಿಂದ ದೂರವಾಗಿದ್ದ ತಾಲ್ಲೂಕಿನ ಕೊಣ್ಣೂರಿನ ಸುತ್ತಲಿನ ಗ್ರಾಮಗಳು ಮಂಗಳವಾರದಿಂದ ಮತ್ತೇ ನೆರೆ ಆತಂಕಕ್ಕೊಳಗಾಗಿವೆ. ಇದರಿಂದ ಹಳೆ ಬೂದಿಹಾಳ ಗ್ರಾಮಕ್ಕೆ ಮರಳಿದ್ದ 10 ಕುಟುಂಬಗಳು ಮತ್ತೆ ನವ ಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ಬಂದವು.

ಲಕಮಾಪುರ ಗ್ರಾಮಕ್ಕೆ ಮತ್ತೇ ಪ್ರವಾಹದ ಭೀತಿ ಕಾಡುತ್ತಿದೆ. ನವಿಲು ತೀರ್ಥ ಜಲಾಶಯ 2079 ಅಡಿ ಸಾಮರ್ಥ್ಯ ಹೊಂದಿದ್ದು ಕೇವಲ ಎರಡು ಅಡಿ ಬಾಕಿ ಇದ್ದು, ವಾಸ್ತವಿಕ ಸ್ಥಿತಿ ಅರಿತು ಒಳಹರಿವಿನ ಪ್ರಮಾಣದಲ್ಲಿ ಶೇ 90ರಷ್ಟು ನೀರನ್ನು ಮಲಪ್ರಭಾ ನದಿ, ಕಾಲುವೆಗೆ ಹರಿಬಿಡಲಾಗುತ್ತಿದೆ. ಇದರಿಂದ ಮತ್ತೆ ಪ್ರವಾಹ ಉಂಟಾಗಬಹುದಾಗಿದೆ.

ಮಂಗಳವಾರ ಸಂಜೆ ಮಾಹಿತಿ ಪ್ರಕಾರ ಒಳಹರಿವು 11,850 ಕ್ಯುಸೆಕ್ ಇದ್ದು, ಒಳ ಹರಿವು 9794 ಕ್ಯುಸೆಕ್ ಇದೆ. ಇದರಲ್ಲಿ 8 ಸಾವಿರ ಕ್ಯುಸೆಕ್ ನದಿಗೆ, ಉಳಿದ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಆದರೆ ಇವರಲ್ಲಿ ನಾಲ್ಕು ಕುಟುಂಬಗಳಿಗೆ ಮನೆಗಳು ಹಂಚಿಕೆಯಾಗಿಲ್ಲ. ಮನೆಗಳಿಲ್ಲದೇ ಅಲ್ಲಿಯೇ ವಾಸಿಸಬೇಕಾದ ಸ್ಥಿತಿ ಇದೆ. ನೀರು ಬಂದಾಗ ಇವರಿಗೆ ಕಾಳಜಿ ಕೇಂದ್ರಗಳೇ ಗತಿಯಾಗಿವೆ.

ತರಕಾರಿ ಹಾನಿ: ಬೂದಿಹಾಳ ಗ್ರಾಮದ ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ತರಕಾರಿ ಬೆಳೆದು ಮಾರಾಟ ಮಾಡಲಾಗುತ್ತದೆ. ಆದರೆ ಮಲಪ್ರಭೆ ಎಲ್ಲವನ್ನೂ ಆಪೋಶನ ಮಾಡಿದೆ. ತುರ್ತಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಲು ತಾಲ್ಲೂಕು ಆಡಳಿತ ಮುಂದಾಗಬೇಕೆಂದು ಹಾನಿಗೊಳಗಾದ ರೈತರು ಆಗ್ರಹಿಸುತ್ತಾರೆ.

ತಹಶೀಲ್ದಾರ್ ಅವರ ನಿರ್ದೇಶನದಂತೆ ಡ್ರೋಣ್ ಕ್ಯಾಮೆರಾ ಮೂಲಕ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದೆ. ವರದಿ ಆದರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು
- ಐ.ವೈ.ಕಳಸಣ್ಣವರ ಕಂದಾಯ ನಿರೀಕ್ಷಕ ಕೊಣ್ಣೂರ

ಬೂದಿಹಾಳ ಗ್ರಾಮದ ಜನರಿಗೆ ನವ ಗ್ರಾಮ ನಿರ್ಮಿಸಲಾಗಿದೆ. ಆದರೆ ಅಲ್ಲಿ ನಾಲ್ಕು ಕುಟುಂಬಗಳಿಗೆ ಮನೆ ಹಂಚಿಕೆಯಾಗಿಲ್ಲ. ಅವರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
- ಮಂಜುನಾಥ್ ಗಣಿ ಪಿಡಿಒ ಕೊಣ್ಣೂರು

ಕಿತ್ತು ಹೋದ ಬೂದಿಹಾಳ ರಸ್ತೆ

ಕಳೆದ ಎರಡು ದಿನಗಳಹಿಂದೆ ಬಿಟ್ಟಿದ್ದ 15 ಸಾವಿರ ಕ್ಯುಸೆಕ್ ನೀರಿನಿಂದ ಉಂಟಾದ ಪ್ರವಾಹಕ್ಕೆ ಹಳೆ ಬೂದಿಹಾಳಕ್ಕೆ ತೆರಳುವ ರಸ್ತೆ 3 ಕಿ.ಮೀ. ಸಂಪೂರ್ಣ ಕಿತ್ತು ಹೋಗಿದೆ. ಇದರಿಂದ ಹಳೆ ಬೂದಿಹಾಳದಲ್ಲಿಯೇ ಕೆಲವು ಕುಟುಂಬ ವಾಸಿಸುತ್ತಿವೆ. ಅವುಗಳಿಗೆ ಹೆಚ್ಚಿನ ತೊಂದರೆಯಾಗಿದೆ. ಬೂದಿಹಾಳ ಗ್ರಾಮಸ್ಥರು ತಮ್ಮ ಎಲ್ಲ ಜಮೀನುಗಳಿಗೆ ಇದೇ ರಸ್ತೆಯಿಂದ ತೆರಳಬೇಕು. ಆದರೆ ತಮ್ಮ ಹೊಲಗಳಿಗೆ ಈಗ ತೆರಳದಂತಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ತುರ್ತಾಗಿ ರಸ್ತೆ ನಿರ್ಮಿಸಬೇಕಿದೆ. ಪದೇ ಪದೇ ಮಲಪ್ರಭಾ ಪ್ರವಾಹಕ್ಕೆ ತೊಂದರೆಗೆ ಒಳಗಾಗುತ್ತಿದ್ದ ಬೂದಿಹಾಳ ಗ್ರಾಮವನ್ನು ಸ್ಥಳಾಂತರ ಮಾಡಿ 15 ವರ್ಷ ಗತಿಸಿದೆ. ಆದರೂ 10 ಕುಟುಂಬಗಳು ಹಳೆ ಬೂದಿಹಾಳ ಗ್ರಾಮದಲ್ಲಿ ವಾಸಿಸುತ್ತಿವೆ. ಆದರೆ ಮಲಪ್ರಭಾ ಪ್ರವಾಹ ಉಂಟಾದಾಗ ಇವರು ತೊಂದರೆಗೆ ಸಿಲುಕಿದರೆ ಇವರನ್ನು ರಕ್ಷಿಸಲು ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಹರಸಾಹಸ ಪಡಬೇಕಿದೆ. ನಮಗೆ ನವ ಗ್ರಾಮದಲ್ಲಿ ಮನೆಗಳಿಲ್ಲ ಆದ್ದರಿಂದ ಮೊದಲಿನ ಊರಲ್ಲೇ ವಾಸಿಸುತ್ತೇವೆ ಎಂದು ಹಳೆ ಬೂದಿಹಾಳ ನಿವಾಸಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.