ನರೇಗಲ್ ಸಮೀಪದ ಮಾರನಬರಿ ಗ್ರಾಮದ ಕೆರೆ ಬತ್ತಿರುವುದು
ಸಮುದಾಯದ ಸಹಭಾಗಿತ್ವದಲ್ಲಿ ಜನರೇ ಅಭಿವೃದ್ಧಿಪಡಿಸಿರುವ ನರೇಗಲ್ ಪಟ್ಟಣದ ಕೋಡಿಕೊಪ್ಪ ಭಾಗದ ಐತಿಹಾಸಿಕ ಹಿರೇಕೆರೆ ಬರಡಾಗಿರುವುದು
ನರೇಗಲ್ ಹಿರೇಕೆರೆ ದಂಡೆಯ ಮೇಲೆ ಬೆಳೆದಿರುವ ಕಂಟಿಗಳು
ನರೇಗಲ್ ಹಿರೇಕೆರೆಯೊಂದರ ತಗ್ಗು ಪ್ರದೇಶದಲ್ಲಿರುವ ನೀರು
ನರೇಗಲ್ ಸಮೀಪದ ಮಾರನಬಸರಿ ಗ್ರಾಮದ ಹಳ್ಳದಲ್ಲಿ ತುಂಬಿರುವ ಹೂಳು
ನರೇಗಲ್ ಸಮೀಪದ ಹಾಲಕೆರೆ ಗ್ರಾಮದ ಹೊಲವೊಂದರಲ್ಲಿ ಖಾಲಿಯಾಗಿರುವ ಕೃಷಿಹೊಂಡ
ನೈಸರ್ಗಿಕ ಸಂಪನ್ಮೂಲಗಳಾದ ಕೆರೆ ಕೊಳ ಹಾಗೂ ಹೊಂಡಗಳ ಅಭಿವೃದ್ಧಿಗೆ ತಾಲ್ಲೂಕು ಪಂಚಾಯ್ತಿ ವತಿಯಿಂದ ಈ ಹಿಂದಿನಿಂದಲೂ ಪ್ರಥಮ ಆದ್ಯತೆ ನೀಡಲಾಗಿದೆ. ಈಗಲೂ ನರೇಗಾದ ಅಡಿ ಅಭಿವೃದ್ಧಿ ಕಾರ್ಯಗಳು ನಡೆದಿವೆ
ಎಸ್.ಕೆ.ಇನಾಮದಾರ್ ರೋಣ ಇಒಬಹುತೇಕ ಗ್ರಾ.ಪಂ.ಗಳಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದು ಕ್ರಿಯಾಯೋಜನೆ ರೂಪಿಸಿ ನರೇಗಾ ಕಾರ್ಮಿಕರಿಂದ ಜಲಮೂಲಗಳ ಅಭಿವೃದ್ಧಿ ನಡೆಸಿದ್ದೇವೆ. ಕೆರೆ ಚೆಕ್ ಡ್ಯಾಂ ನೀರಿನ ತೊಟ್ಟಿ ಹಾಗೂ ಹಳ್ಳಗಳ ಅಭಿವೃದ್ಧಿಗೂ ಮುಂದಾಗಿದ್ದೇವೆ ಹಾಗೂ ಜನರಿಗೆ ಅರಿವು ಮೂಡಿಸುತ್ತಿದ್ದೇವೆ
ಡಿ. ಮೋಹನ್ ಗಜೇಂದ್ರಗಡ ಇಒಐತಿಹಾಸಿಕ ಹಿರೇಕೆರೆಯಲ್ಲಿ ನೀರಿಲ್ಲ
ನರೇಗಲ್ ಪಟ್ಟಣದ ಅಬ್ಬಿಗೇರಿ ಮಾರ್ಗದ ಕಾಲೇಜು ರಸ್ತೆಯ ಎಡಭಾಗದಲ್ಲಿರುವ ಐತಿಹಾಸಿಕ ಹಿರೇಕೆರೆಯನ್ನು ಸ್ಥಳೀಯರು ನೆಲಜಲ ಸಂರಕ್ಷಣಾ ಸಮಿತಿ ರಚನೆ ಮಾಡಿಕೊಂಡು ಸಮುದಾಯದ ಸಹಭಾಗಿತ್ವದಲ್ಲಿ ಉಚಿತವಾಗಿ ಹೂಳೆತ್ತುವ ಕಾರ್ಯ ಮಾಡಿದರು. ದೊಡ್ಡ ಕೆರೆಯನ್ನು 4 ಚಿಕ್ಕ ಕೆರೆಗಳನ್ನಾಗಿ ಅಭಿವೃದ್ಧಿಪಡಿಸಿದರು. ಆದರೆ ಕೆರೆಯಲ್ಲಿ ನೀರಿಲ್ಲದೇ ಬರಡಾಗಿ ಕಾಣುತ್ತಿದೆ. ಒಂದು ಕೆರೆಯ ತಗ್ಗು ಪ್ರದೇಶದಲ್ಲಿ ಅಲ್ಪಪ್ರಮಾಣದ ನೀರಿದೆ. ಅಲ್ಲಿಗೆ ಕೊಕ್ಕರೆ ನವಿಲು ಎಮ್ಮೆ ದನಕರುಗಳು ಬಂದು ನೀರು ಕುಡಿಯುತ್ತವೆ. ಆದರೆ ಕೆರೆಯ ಜಾಗವನ್ನು ಬಯಲು ಬಹಿರ್ದೆಸೆಗೆ ಬಳಕೆ ಮಾಡುತ್ತಿದ್ದಾರೆ ಮತ್ತು ಸಂಜೆಯಾಗುತ್ತಿದ್ದಂತೆ ಕುಡುಕರು ಪುಂಡರು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಸುತ್ತಲೂ ಮುಳ್ಳಿನ ಕಂಟಿಗಳು ಮತ್ತೆ ಬೆಳೆದು ನಿಂತಿವೆ. ಇದರಿಂದ ಸಾರ್ವಜನಿಕರು ಅಭಿವೃದ್ದಿ ಮಾಡಿಕೊಟ್ಟ ಕೆರೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಪಟ್ಟಣ ಪಂಚಾಯ್ತಿ ಎಡವಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಕೆರೆಗಳ ಒತ್ತುವರಿ ತೆರವು ಯಾವಾಗ?
ನರೇಗಲ್ ಪಟ್ಟಣದ ಐತಿಹಾಸಿಕ ಹಿರೇಕೆರೆ ಮಾಡಲಗೇರಿ ನೈನಾಪುರ ಗ್ರಾಮಗಳ ಊರಮುಂದಿನ ಎರಡು ಕೆರೆ ಅಬ್ಬಿಗೇರಿ ಗ್ರಾಮದ ಕೆಂಪು ಕೆರೆ (ಪ್ರಕರಣ ನ್ಯಾಯಾಲಯದಲ್ಲಿದೆ) ದೇವಿ ಕೆರೆ ಹೊಸಳ್ಳಿಯ ಹೊಸಕೆರೆ ನಿಡಗುಂದಿ ಊರಕೆರೆ ಹಿರೇಹಾಳ ಬಳಗೋಡ ಬೆಳವಣಿಕೆ ಗ್ರಾಮಗಳ ಕುಡಿಯುವ ನೀರಿನ ಕೆರೆ ಕೌಜಗೇರಿ ಕುಡಿಯುವ ನೀರಿನ ಊರಮುಂದಿನ ಕೆರೆ ಮಾಳವಾಡದ ಕುಡಿಯುವ ನೀರಿನ ಕೆರೆ ಹಳಕೆರೆ ಬೈರಾಪುರ ತಾಂಡದ ಕೆರೆ ನಾಗೇಂದ್ರಗಡದ ಸಣ್ಣ ನೀರಾವರಿ ಕೆರೆ ಹಾಗೂ ಬೆಣಚಮಟ್ಟಿ ಗ್ರಾಮದ ಸಣ್ಣ ನೀರಾವರಿ ಕೆರೆಗಳು ಒತ್ತುವರಿಯಾಗಿವೆ. ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕೆರೆಗಳ ಒತ್ತುವರಿಯನ್ನು ಹಂತಹಂತವಾಗಿ ತೆರುವುಗೊಳಿಸಲಾಗುತ್ತಿದೆ ಎಂದು ರೋಣ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.
ದಿಕ್ಕಿಲ್ಲದಂತಾಗಿವೆ ಹಳ್ಳಗಳು;
ಯಾವ ಇಲಾಖೆಯೂ ಕಾಳಜಿ ವಹಿಸುತ್ತಿಲ್ಲ ಜಲಮೂಲಗಳಲ್ಲಿ ಮುಖ್ಯವಾಗಿರುವ ಹಳ್ಳಗಳ ರಕ್ಷಣೆಗೆ ಯಾವ ಇಲಾಖೆಯೂ ಮುಂದಾಗುತ್ತಿಲ್ಲ. ಎಲ್ಲೆಡೆ ಹಳ್ಳಗಳ ಒತ್ತುವರಿ ಅಧಿಕವಾಗಿದೆ. ಮರಳು ದಂಧೆಗಾಗಿ ಅದರ ಒಡಲನ್ನು ಅಗೆದು ಮಾರಿಕೊಳ್ಳುತ್ತಿದ್ದಾರೆ. ನರೇಗಲ್ ಪಟ್ಟಣದ ಗಡ್ಡಿಹಳ್ಳ ಕಲ್ಲಹಳ್ಳ ಅಬ್ಬಿಗೇರಿ ಹಳ್ಳ ಮಾರನಬಸರಿ ಹಳ್ಳ ಸೇರಿದಂತೆ ಅನೇಕ ಹಳ್ಳಗಳಲ್ಲಿ ಹೂಳು ತುಂಬಿದೆ. ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ಇದರಿಂದ ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಹಳ್ಳಕ್ಕೆ ನೀರು ಹರಿದು ಬರುವ ಮಾರ್ಗಗಳು ಬದಲಾಗಿವೆ. ಇದರಿಂದ ನೀರು ಸಂಗ್ರಹಣೆ ಹಾಗೂ ಅಂತರ್ಜಲಕ್ಕೆ ಪೆಟ್ಟು ಬಿದ್ದಿದೆ. ಯಾವ ಇಲಾಖೆಯು ಹಳ್ಳ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ರಕ್ಷಣೆಗೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.