ಅರಕಲಗೂಡು: ಬಿತ್ತನೆ ಬೀಜದ ಕೊರತೆ ಇಲ್ಲ
ಅರಕಲಗೂಡು ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕಾಗಿದೆ. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದರು. ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ತಳಿಯ ಮುಸುಕಿನ ಜೋಳದ 223 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು ಈ ವರೆಗೆ 75.90 ಕ್ವಿಂಟಲ್ ವಿತರಣೆಯಾಗಿದೆ. ಉಳಿದಂತೆ ಅಲಸಂದೆ 62.8 ಕ್ವಿಂಟಲ್ ದಾಸ್ತಾನಿದ್ದು 35.2 ಕ್ವಿಂಟಲ್ ವಿತರಣೆ ತೊಗರಿ 60 ಕೆ.ಜಿ. ದಾಸ್ತಾನು 25 ಕೆ.ಜಿ. ವಿತರಣೆ ರಾಗಿ ದಾಸ್ತಾನು 85 ಕ್ವಿಂಟಲ್ 4.65 ಕ್ವಿಂಟಲ್ ವಿತರಣೆ ಹೆಸರು ದಾಸ್ತಾನು 2.40 ಕ್ವಿಂಟಲ್ 60 ಕೆ.ಜಿ. ವಿತರಣೆಯಾಗಿದೆ. ಹೈಬ್ರೀಡ್ ಭತ್ತ ದಾಸ್ತಾನು 67.5 ಕ್ವಿಂಟಲ್ ಇದ್ದು 11.30 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಸಾಮಾನ್ಯ ಭತ್ತ ದಾಸ್ತಾನು 75 ಕ್ವಿಂಟಲ್ 8.5 ಕ್ವಿಂಟಲ್ ವಿತರಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲ ಬಿತ್ತನೆ ಬೀಜದ ದರಗಳಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ 43640 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಈವರೆಗೆ 27040 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತಂಬಾಕು 7450 ಹೆಕ್ಟೇರ್ ಮುಸುಕಿನ ಜೋಳ 18700 ಹೆಕ್ಟೇರ್ ಅಲಸಂದೆ 700 ಹೆಕ್ಟೇರ್ ಹೆಸರು 40 ಹೆಕ್ಟೇರ್ ತೊಗರಿ 45 ಹೆಕ್ಟೇರ್ ಉದ್ದು 30 ಹೆಕ್ಟೇರ್ ಮತ್ತು ನೆಲಗಡಲೆ 75 ಹೆಕ್ಠೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.