ಹಾವೇರಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಆರೋಪದಡಿ ಬಿಖಾ ರಾಮ್ ಅಲಿಯಾಸ್ ವಿಕ್ರಮ್ (32) ಎಂಬುವವರನ್ನು ಹಾವೇರಿ ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದು, ಮುಂಬೈನ ಭಯೋತ್ಪಾದನಾ ನಿಗ್ರಹ ಪಡೆಯ ವಶಕ್ಕೆ ಒಪ್ಪಿಸಿದ್ದಾರೆ.
.ಜೀವ ಬೆದರಿಕೆ | ಬಿಗಿ ಭದ್ರತೆಯೊಂದಿಗೆ ದುಬೈಗೆ ಸಲ್ಮಾನ್ ಖಾನ್ ಪ್ರಯಾಣ.
‘ರಾಜಸ್ಥಾನ್ದ ಜಲೂರ್ ನಿವಾಸಿಯಾದ ಬಿಖಾ ರಾಯ್, ಕೆಲಸ ಹುಡುಕಿಕೊಂಡು ಇತ್ತೀಚೆಗೆ ಹಾವೇರಿಗೆ ಬಂದಿದ್ದ. ಇಲ್ಲಿಯ ಗೌಡರ ಓಣಿಯ ಕೊಠಡಿಯೊಂದರಲ್ಲಿ ನೆಲೆಸಿದ್ದ. ಈತನ ಇರುವಿಕೆ ಬಗ್ಗೆ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆ ಮಾಹಿತಿ ನೀಡಿತ್ತು’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ತಿಳಿಸಿದರು.

‘ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡಿಕೊಂಡಿದ್ದ ಬಿಖಾ ರಾಯ್, ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆಯೊಡ್ಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು, ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು’ ಎಂದು ಹೇಳಿದರು.
.ಸಲ್ಮಾನ್ ಖಾನ್ ಹತ್ಯೆಗೆ ಸಂಚು: ಮತ್ತೊಬ್ಬ ಬಂಧನ.
‘ಹಲವು ತಿಂಗಳ ಹಿಂದೆಯೇ ಆರೋಪಿ, ರಾಜ್ಯಕ್ಕೆ ಬಂದಿದ್ದಾನೆ. ಮೊದಲು ಬೇರೆ ನಗರದಲ್ಲಿ ಈತ ನೆಲೆಸಿದ್ದ. ಒಂದೂವರೆ ತಿಂಗಳ ಹಿಂದೆಯಷ್ಟೇ ಈತ ಹಾವೇರಿಗೆ ಬಂದಿದ್ದನೆಂದು ಗೊತ್ತಾಗಿದೆ. ಈತನನ್ನು ಬಂಧಿಸಿ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಗೆ ಒಪ್ಪಿಸಲಾಗಿದೆ. ಪ್ರಕರಣದ ಬಗ್ಗೆ ಅವರೇ ತನಿಖೆ ಮುಂದುವರಿಸಲಿದ್ದಾರೆ’ ಎಂದು ತಿಳಿಸಿದರು.
.ಗುಂಡಿನ ದಾಳಿ ಕೃತ್ಯ: ಸಲ್ಮಾನ್ ಖಾನ್ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಶಿಂದೆ ಭೇಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.