ಹಾವೇರಿ ಜಿಲ್ಲೆಯಲ್ಲಿ ಡೆಂಗಿ, ಜ್ವರ, ಮೈ ಕೈ ನೋವು, ಅತೀಸಾರ, ಟೈಪಾಯಿಡ್ ಹಾಗೂ ಇತರೆ ಅನಾರೋಗ್ಯ ಸಮಸ್ಯೆ ಪ್ರಕರಣ ಹೆಚ್ಚುತ್ತಿವೆ. ಹಾವೇರಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆಯ ಸೌಲಭ್ಯ, ವೈದ್ಯರ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ಇಲ್ಲಿದೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿದೆ. ಆದರೆ ಆಸ್ಪತ್ರೆಯ ಆವರಣವೇ ಕಾಯಿಲೆಗಳ ತಾಣವಾಗಿದ್ದು ಸ್ವಚ್ಛತೆಗೆ ಒತ್ತು ನೀಡಬೇಕು.
ಪ್ರಕಾಶ ದೇವಗಿರಿ, ನಿವಾಸಿಮಗಳ ಹೆರಿಗೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಿಸಿದ್ದು ಚಿಕಿತ್ಸೆ ಚೆನ್ನಾಗಿದೆ. ಆದರೆ ವೈದ್ಯರ ತಪಾಸಣೆಗೆ ಗಂಟೆಗಟ್ಟಲೇ ಕಾಯಬೇಕು. ಆಗಾಗ ಔಷಧಿಗಳನ್ನು ಹೊರಗಡೆ ಬರೆದುಕೊಡುತ್ತಾರೆ.
ಪಾರ್ವತಮ್ಮ ಮನ್ನಂಗಿ, ಹಾವೇರಿಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಕಟ್ಟಡದ ಮೂರನೇ ಮಹಡಿ ನಿರ್ಮಾಣ ಆಗುತ್ತಿದ್ದು ಸದ್ಯದಲ್ಲೇ ನಮಗೆ ಹಸ್ತಾಂತರವಾಗಲಿದೆ. ಹೊಸದಾಗಿ 70 ಬೆಡ್‌ಗಳು ಲಭ್ಯವಾಗಲಿವೆ
ಡಾ.ಪಿ.ಆರ್. ಹಾವನೂರ, ಹಾವೇರಿ ಜಿಲ್ಲಾ ಶಸ್ತ್ರ ಚಿಕಿತ್ಸಕಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಜಾಗದ ಕೊರತೆಯಿಂದ ಬೆಡ್ ಹಾಕಲು ಸದ್ಯಕ್ಕೆ ಸಮಸ್ಯೆಯಾಗಿದೆ. ಕೆಲ ದಿನಗಳಲ್ಲಿ ಸೂಕ್ತ ವಾರ್ಡ್‌ನಲ್ಲಿಯೇ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು.
ಅಕ್ಷಯ್ ಶ್ರೀಧರ, ಹಾವೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಸ ಎಸೆದಿರುವುದು
ಜಿಲ್ಲಾಸ್ಪತ್ರೆಯ ಕಟ್ಟಡದ ಗೋಡೆಗೆ ಎಲೆ–ಅಡಿಕೆ ಹಾಗೂ ಗುಟ್ಕಾ ತಿಂದು ಉಗುಳಿರುವುದು
ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜನರು ಓಡಾಡುವ ರಸ್ತೆಯಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು