ಅಕ್ಕಿಆಲೂರು: ಹಾನಗಲ್ ತಾಲ್ಲೂಕಿನ ನೀರಲಗಿ ಮ ಆಡೂರು ಗ್ರಾಮದ ಹಳೆ ಜನತಾ ಪ್ಲಾಟ್‍ನಲ್ಲಿರುವ ನಂ.3ನೇ ಅಂಗನವಾಡಿ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಪರಿಶೀಲಿಸಿದರು.

ಅಂಗನವಾಡಿ ಕೇಂದ್ರಕ್ಕೆ ನಿವೇಶನ ಇಲ್ಲದೇ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಬಾಡಿಗೆ ಕಟ್ಟಡವೂ ಶಿಥಿಲಗೊಂಡಿದ್ದು, ಸೋರುತ್ತಿದೆ. ಹುಳ, ಹುಪ್ಪಡಿಗಳ ಕಾಟವೂ ಹೆಚ್ಚಿದೆ ಎಂದು ಅಂಗನವಾಡಿ ಕಾರ್ಯಕರ್ತೆ ರತ್ನವ್ವ ಕಮ್ಮಾರ ಹೇಳಿದರು. ತಕ್ಷಣ ಸ್ಪಂದಿಸಿದ ಸಚಿವರು, ಅಗತ್ಯ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.

ಗ್ರಾಮದಲ್ಲಿರುವ ಇನ್ನೆರಡು ಅಂಗನವಾಡಿ ಕೇಂದ್ರಗಳ ಕಟ್ಟಡಗಳೂ ಶಿಥಿಲಗೊಂಡಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಶಾಸಕ ಶ್ರೀನಿವಾಸ ಮಾನೆ, ಜಿ.ಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ತಾ.ಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಉಮೇಶ ಗೌಳಿ, ಎಂ.ಎಫ್.ಚಿಕ್ಕಮಠ, ಚಂದ್ರಶೇಖರ ದೇವಗಿರಿ, ಬಸನಗೌಡ ಪಾಟೀಲ, ಸುರೇಶ ಗೊದಮನಿ, ದೇವೇಂದ್ರ ತಳವಾರ, ಚಂದ್ರಪ್ಪ ಕಲ್ಲವಡ್ಡರ, ಪುಟ್ಟರಾಜ ಹೊಸಮನಿ, ರಾಜೇಸಾಬ ಹುಲಿಕಟ್ಟಿ, ಶಂಭಣ್ಣ ಕಮ್ಮಾರ, ಪ್ರಭುಗೌಡ ಪಾಟೀಲ, ಆನಂದ ಬೇವಿನಕಟ್ಟಿ, ದಾವಲಮಲೀಕ್ ಹುರುಳಿಕುಪ್ಪಿ, ಸಂಜೀವ ಮಹಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.