ಹಿರೇಕೆರೂರು: ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿ ತಾಲ್ಲೂಕು ಕಚೇರಿ ನೌಕರ ರುದ್ರಣ್ಣ ಯಡವಣ್ಣವರ ಅವರ ಸಾವಿನ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿರೇಕೆರೂರು ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದಿಂದ ಗುರುವಾರ ತಹಶೀಲ್ದಾರ್ ಎಚ್.ಪ್ರಭಾಕರಗೌಡ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ನೌಕರರು ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಕಚೇರಿಗಳಲ್ಲಿ ಮೇಲಾಧಿಕಾರಿಗಳು ವಾಸ್ತವ ಸ್ಥಿತಿಯನ್ನು ಪರಿಶೀಲಿಸದೇ ಸಾರ್ವಜನಿಕರ ಎದುರಿಗೆ ನೌಕರರನ್ನು ನಿಂದಿಸುವುದು, ವೈಯುಕ್ತಿಕ ಕೆಲಸಗಳಿಗೆ ರಜೆ ನೀಡುವುದನ್ನು ನಿರಾಕರಿಸುವುದು ಮತ್ತು ನೌಕರರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ನೀಡುತ್ತಿದ್ದಾರೆ. ಇದರಿಂದ ನೌಕರರು ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದ್ದಾರೆ ಕಾರಣ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ, ನೌಕರರ ಕೆಲಸದ ಒತ್ತಡ ನಿವಾರಿಸಬೇಕು ಎಂದು ನೌಕರರು ಮನವಿ ಸಲ್ಲಿಸಿದರು.

ಕಂದಾಯ ಇಲಾಖಾ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಸಿದ್ದನಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ.ಎತ್ತಿನಮನಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ನಿರ್ದೇಶಕ ಮೇಘರಾಜ ಮಾಳಗಿಮನಿ, ನಾಗರಾಜ ಕಟ್ಟಿಮನಿ, ಝಡ್.ಎ.ಹೊಸಳ್ಳಿ, ಚನ್ನಬಸಪ್ಪ ಕಾಯಕದ, ಶಿವಾನಂದಪ್ಪ ಆಪಿನಕೊಪ್ಪ, ಎನ್.ಎಸ್.ಸೋನೆ, ಕಲ್ಲಪ್ಪ ಲಮಾಣಿ, ಸಂದೀಪ ಬರಡಿ, ಸಾಕಮ್ಮ ವಾಲ್ಮೀಕಿ, ವಾಣಿಶ್ರೀ ಹಿರೇಕೆರೂರು, ಆಶಾ ಶಿಗ್ಗಾವಿ, ನಂದಾ ಹಲಗೇರಿ, ಕಾವ್ಯ ಎಸ್.,ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.