ರಾಣೆಬೆನ್ನೂರು: ‘ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು’ ಎಂದು ರಾಣೆಬೆನ್ನೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಸಾವುಕಾರ ಹೇಳಿದರು.

ನಗರದ ಗುಪ್ತ ಪ್ರೌಢಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಮಾತನಾಡಿ, ‘ಮಗುವಿನ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸಬೇಕು’ ಎಂದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಹಲಗೇರಿ ಮಾತನಾಡಿದರು.

ಪ್ರಾಥಮಿಕ ಶಾಲಾ ಮಕ್ಕಳ ಸ್ಪರ್ಧೆಗಳು ಆಂಗ್ಲೊ ಉರ್ದು ಶಾಲೆ ಮತ್ತು ಪ್ರೌಢ ವಿಭಾಗದ ಸ್ಪರ್ಧೆಗಳು ಗುಪ್ತಾ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭಾಕರ ಚಿಂದಿ, ಸಿ.ಬಿ.ಅಡಿವೇರ, ರಮೇಶ ಚಲವಾದಿ, ಎಂ.ಎನ್. ಚೌಡಣ್ಣನವರ, ಮಾಲತೇಶ ಚಲವಾದಿ, ಎಂ.ಸಿ.ಬಲ್ಲೂರ, ಬಸವರಾಜ್ ನಾಯ್ಕ, ಚನ್ನಬಸಪ್ಪ, ಹೇಮಗಿರಿ ಕೋರಿ, ಚಂದ್ರಪ್ಪ ಮೇಗಳಮನಿ, ಶಿವರಾಜ್ ಅಡರಕಟ್ಟಿ, ಮಂಜುಳಾ ಕುಲಕರ್ಣಿ, ಎಸ್.ಎಂ.ಬನ್ನಿಕೋಡ, ಶಿಕ್ಷಕ ಮೃತ್ಯುಂಜಯ ಅಂಗಡಿ, ಐರಣಿ ಇಸ್ಮಾಯಿಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.