ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ನಡೆಯಿತು
ಡಾ.ರಾಜಶೇಖರ ಮಾಲಿ
ಡಾ.ರಾಜಕುಮಾರ ಕುಲಕರ್ಣಿ
ಹೊಸದಾಗಿ ಕಂಡುಬಂದ ಕುಷ್ಠರೋಗಿಗಳಿಗೆ ಬೆನ್ನಲ್ಲೇ ಚಿಕಿತ್ಸೆ ಆರಂಭಿಸಲಾಗಿದೆ. ರೋಗಿಗಳನ್ನು ಗುಣಪಡಿಸುವ ಜೊತೆಗೆ ಕುಷ್ಠರೋಗ ಮುಕ್ತ ಜಿಲ್ಲೆಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಜನರೂ ಸಹಕಾರ ನೀಡಬೇಕು.
ಡಾ.ರಾಜಶೇಖರ ಮಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ರೋಗಲಕ್ಷಣ ಕಂಡುಬಂದರೂ ಬಹುತೇಕ ಜನ 6 ತಿಂಗಳಿಂದ 1 ವರ್ಷದವರೆಗೆ ಮುಚ್ಚಿಡುತ್ತಾರೆ. ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಇದು ರೋಗ ವ್ಯಾಪಿಸಲು ಪ್ರಮುಖ ಕಾರಣ.
ಡಾ.ರಾಜಕುಮಾರ ಕುಲಕರ್ಣಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ
‘ತಿಳಿವಳಿಕೆ ಜೊತೆಗೆ ರೋಗ ಪತ್ತೆ’
‘ಈ ಮೊದಲು ಕುಷ್ಠರೋಗ ಪ್ರಕರಣಗಳು ಕಂಡುಬಂದ ಪ್ರದೇಶದಲ್ಲಿ ಮಾತ್ರ ಅಭಿಯಾನ ನಡೆಸಲಾಗುತ್ತಿತ್ತು. ಕೋವಿಡ್ ಕಾರಣ ಕಳೆದೆರಡು ವರ್ಷಗಳಲ್ಲಿ ಹೆಚ್ಚಾಗಿ ಗಮನಹರಿಸಲಿಲ್ಲ. ಹಾಗಾಗಿ ಈ ಬಾರಿ ಜಿಲ್ಲೆಯ ಎಲ್ಲ ಮನೆಮನೆಗೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಮೂಡಿಸುವ ಜೊತೆಗೆ ರೋಗ ಪತ್ತೆ ಕಾರ್ಯ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು. ‘ಕುಷ್ಠರೋಗಿಗಳಲ್ಲಿ ನರಗಳ ಹಾನಿಯಿಂದಾಗಿ ಸ್ಪರ್ಶ ಜ್ಞಾನ ಕಳೆದುಕೊಳ್ಳುತ್ತದೆ. ಕೈಕಾಲುಗಳಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ. ಬೇಗ ಚಿಕಿತ್ಸೆ ಪಡೆದರೆ ಅಂಗವಿಕಲತೆ ತಡೆಯಬಹುದು. ಹಾಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಒಂದೊಂದು ತಿಂಗಳ ಮಾತ್ರೆ ನೀಡಲಾಗುವುದು. ಮಾತ್ರೆ ಸೇವಿಸಿದ ಬಗ್ಗೆ ದೃಢಪಡಿಸಿಕೊಳ್ಳಲು ಮಾತ್ರೆಗಳ ಖಾಲಿಸ್ಟ್ರಿಪ್ ಪಡೆದು ಮತ್ತೆ ಔಷಧ ವಿತರಿಸಲಾಗುವುದು’ ಎಂದು ಅವರು ವಿವರಿಸಿದರು.