ಅಫಜಲಪುರ ಪಟ್ಟಣದಲ್ಲಿ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಮೆರವಣಿಗೆಗೆ ಕೆಪಿಸಿಸಿ ಸದಸ್ಯ ಅರುಣಕುಮಾರ.ಎಂ.ವೈ.ಪಾಟೀಲ್ ಚಾಲನೆ ನೀಡಿದರು.
ಕನ್ನಡ ಶಾಲೆಗಳ ಸ್ಥಿತಿಗೆ ಕಳವಳ
ಸಮ್ಮೇಳನ ಸರ್ವಾಧ್ಯಕ್ಷ ಬಿ.ಎಂ.ರಾವ್ ಮಾತನಾಡಿ ‘ಕನ್ನಡ ನುಡಿಯ ಸೇವಕನಿಗೆ ಕೊಡಬಹುದಾದ ಶ್ರೇಷ್ಠ ಪದವಿ ನೀಡಿ ಗೌರವಿಸಿದ ಎಲ್ಲರಿಗೂ ಧನ್ಯವಾದಗಳು. ಭೀಮಾ ತೀರದ ಹರಿವಿನಲ್ಲಿ ವಚನ ಜನಪದ ಸಾಹಿತ್ಯ ತತ್ವಪದ ಶ್ರೀಮಂತಿಕೆ ಬೆಳೆಯುತ್ತಿದೆ. ಹೊರ ರಾಜ್ಯಗಳಲ್ಲಿ ಕನ್ನಡ ಶಾಲೆಗಳು ಬೆಳೆಯುತ್ತಿದ್ದರೆ ನಮ್ಮ ನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದ್ದು ಶೋಚನೀಯ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಪಟ್ಟಣದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಬೇಕು. ವಿಶ್ವವಿದ್ಯಾಲಯದಲ್ಲಿ ಕಡಕೋಳ ಮಡಿವಾಳಪ್ಪ ಹಾಗೂ ನೀಲೂರು ನಿಂಬೆಕ್ಕ ಸ್ಮಾರಕ ನಿರ್ಮುಸಿ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕು’ ಎಂದು ಹೇಳಿದರು.