ನಗರದಲ್ಲಿ 4 ವರ್ಷಗಳಿಂದ ಟ್ರಾಫಿಕ್ ವಾರ್ಡನ್‌ಗಳನ್ನು ನೇಮಕ ಮಾಡಿಲ್ಲ. ನಮಗೆ 40–60 ಜನ ಸಿಕ್ಕರೆ ಅನುಕೂಲವಾಗುತ್ತದೆ. ಸದ್ಯ ಶಿಕ್ಷಕರು ವ್ಯಾಪಾರಸ್ಥರು ಟ್ರಾಫಿಕ್ ವಾರ್ಡನ್‌ಗಳಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಜನ ಸ್ವಯಂ ಸೇವಾಮನೋಭಾವದಿಂದ ಮುಂದೆ ಬರಬೇಕು
–ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತ
ನಮ್ಮ ಎಲ್ಲ ಟ್ರಾಫಿಕ್ ವಾರ್ಡನ್‌ಗಳು ಸಹಕಾರದೊಂದಿಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಿಂದ ನಮಗೆ ಪ್ರತ್ಯೇಕ ಕಚೇರಿ ಮೇಜು ಕುರ್ಚಿ ಕೊಟ್ಟಿದ್ದಾರೆ. ನನಗೆ ವೈರ್‌ಲೆಸ್ ಕೊಟ್ಟಿದ್ದಾರೆ. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಒದಗಿಸಿದರೆ ಅನುಕೂಲ
-ಎಸ್.ಡಿ.ಪಾಟೀಲ ಟ್ರಾಫಿಕ್ ಚೀಫ್ ವಾರ್ಡನ್
ನಾನು 7 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದೇನೆ. ನಿತ್ಯ ಸಂಜೆ 6ರಿಂದ 9ರವರೆಗೆ ಸೇವೆ ಸಲ್ಲಿಸುತ್ತೇನೆ. ಈ ಕೆಲಸ ಮಾಡುವಾಗ ಮನೆಯಲ್ಲಿನ ಕಿರಿಕಿರಿ ಮರೆಯುತ್ತದೆ. ವಾಹನ ಸವಾರರು ಸಹಕರಿಸುತ್ತಾರೆ.
-ನಂದಕುಮಾರ ಕುಂಬಾರ ಅಸಿಸ್ಟೆಂಟ್ ಚೀಫ್ ಟ್ರಾಫಿಕ್ ವಾರ್ಡನ್
ನನಗೀಗ 40 ವರ್ಷ 6 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದೇನೆ. ನಿತ್ಯ ಸಂಜೆ 6ರಿಂದ 9 ಗಂಟೆವರೆಗ ಸೇವೆ ಸಲ್ಲಿಸುತ್ತೇನೆ. ಪ್ರಯಾಣಿಕರು ನಮ್ಮ ಮಾತು ಕೇಳುತ್ತಿದ್ದಾರೆ. ಕೆಲ ಅಪಘಾತ ತಪ್ಪಿಸಿದ ಜೀವ ಉಳಿಸಿದ ಸಾರರ್ಥಕತೆ ಇದೆ.
-ಬಸವರಾಜ ದಂಡಿ ಶಿಕ್ಷಕ ಟ್ರಾಫಿಕ್ ವಾರ್ಡನ್
ನನಗೀಗ 21 ವರ್ಷ ಟ್ರಾಫಿಕ್ ವಾರ್ಡನ್ ಆಗಿ 8 ತಿಂಗಳಾಗಿದೆ. ಸೇನಾ ತರಬೇತಿ ಪಡೆದಿದ್ದೇನೆ. ನಮ್ಮ ತಂದೆಯೂ 8 ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಮಾಡುತ್ತಿದ್ದಾರೆ. ನಮ್ಮದು ಎಲೆಕ್ಟ್ರಿಕಲ್ ಶಾಪ್ ಇದೆ. ವಾರದಲ್ಲಿ 2 ದಿನ 16 ಗಂಟೆ ಸೇವೆ ಮಾಡುತ್ತೇನೆ.