ಕಲಬುರ್ಗಿ: ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ನಾಗರಾಭಿವೃದ್ಧಿ ಪ್ರಾಧಿಕಾರ ಅನುದಾನದಡಿಯಲ್ಲಿ, ₹ 1.35 ಕೋಟಿ ವೆಚ್ಚದಲ್ಲಿ ಕಲಬುರ್ಗಿ ನಗರದಲ್ಲಿ ಸಿಗ್ನಲ್ ಗಳ ಉದ್ಘಾಟನೆ ಹಾಗೂ ₹ 17.38 ಕೋಟಿ ವೆಚ್ಚದಲ್ಲಿ ನಗರದ ಹೀರಾಪೂರ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ, ಅನ್ನಪೂರ್ಣ ಕ್ರಾಸ್‌ದಿಂದ ಖರ್ಗೆ ಪೆಟ್ರೋಲ್ ಬಂಕ್‌ವರೆಗೆ ಹಾಗೂ ಜಗತ್ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ ಬಸ್ ರಾಪಿಡ್ ಟ್ರಾನ್ಸಿಟ್ ಜೊತೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2020-21ನೇ ಸಾಲಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ₹ 6.83 ಕೋಟಿ ವೆಚ್ಚದಲ್ಲಿ ಕಲಬುರ್ಗಿಯ ನಗರದ ಮೋಹನ ಲಾಡ್ಜ್ ನಿಂದ ರಾಮ ಮಂದಿರವರೆಗೆ ರಸ್ತೆ ವಿಭಜಕ, ಫುಟ್ ಪಾತ್, ವಿದ್ಯುತ್ ನಿರ್ಮಾಣ ಕಾಮಗಾರಿ ಹಾಗೂ 4.77 ಕೋಟಿ ವೆಚ್ಚದಲ್ಲಿ ನಗರದ ರಾಜಾಪೂರ ಬಳಿಯ ಮುಖ್ಯ ರಸ್ತೆ ಸೇಡಂ ರಸ್ತೆಯಿಂದ ರಿಂಗ್ ರಸ್ತೆಯವರೆಗೂ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡುವರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಬೆಂಗಳೂರಿನ ಎಚ್. ಎಸ್. ಆರ್ ಲೇಔಟ್ ನಲ್ಲಿ ಬಾಲಕ, ಬಾಲಕಿಯರ ವಸತಿ ನಿಲಯ ಮತ್ತು ಆಡಳಿತ ಕಚೇರಿ ನಿರ್ಮಾಣಕ್ಕಾಗಿ ₹ 5.9 ಕೋಟಿ ವೆಚ್ಚದ ಕಾಮಗಾರಿಗೂ ಹಾಗೂ ₹ 3.30 ಕೋಟಿ ವೆಚ್ಚದಲ್ಲಿ ಕಲಬುರ್ಗಿ ನಗರದ ವಿವಿಧ ಪ್ರದೇಶಗಳಲ್ಲಿ ತೆರೆದ ಚರಂಡಿಗೆ ಕೊಳವೆ ಮಾರ್ಗಗಳ ದುರಸ್ತಿ ಮತ್ತು ಒಳಚರಂಡಿ ವ್ಯವಸ್ಥೆಗೆ ಜೋಡಣೆ ಮಾಡುವ ಕಾರ್ಯ ಸೇರಿದಂತೆ ಒಟ್ಟು ₹96.24 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.