ಹುಣಸಗಿ: ತಾಲ್ಲೂಕಿನ ಕೋಳಿಹಾಳ ಹಾಗೂ ಮಂಜಲಾಪುರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಗಳಿಗೆ ಶಾಸಕ ರಾಜಾ ವೇಣುಗೋಪಾಲನಾಯಕ ಪರಿಹಾರ ಹಣದ ಚೆಕ್ ವಿತರಿಸಿದರು.

ಮಂಜಲಾಪುರ ಹಳ್ಳಿ ಗ್ರಾಮದ ಭಾಗ್ಯಶ್ರೀ(ಭಾಗಮ್ಮ) ಮಲ್ಲಪ್ಪ ಕಂಬಳಿ ಎಂಬ ಮಗು ಕಳೆದ 8 ತಿಂಗಳ ಹಿಂದೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು. ಹಾಗೂ ಕಳೆದ ವರ್ಷ ಕೋಳಿಹಾಳ ಗ್ರಾಮದ ಯುವಕ ಮಲ್ಲಿಕಾರ್ಜುನ ಬಸಣ್ಣ ಎಂಬುವರಿಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಜೆಸ್ಕಾಂ ವತಿಯಿಂದ ಮಲ್ಲಿಕಾರ್ಜುನ ಕುಟುಂಬಕ್ಕೆ ₹5 ಲಕ್ಷ ಹಾಗೂ ಭಾಗ್ಯಶ್ರೀ ಕುಟುಂಬಕ್ಕೆ ₹5.30 ಲಕ್ಷದ ಪರಿಹಾರದ ಚೆಕ್ ಅನ್ನು ಶಾಸಕರು ವಿತರಿಸಿದರು.

ನಂತರ ಮಾತನಾಡಿ, ‘ಮಳೆಗಾಲದಲ್ಲಿ ಗಾಳಿ-ಮಳೆಗೆ ವಿದ್ಯುತ್ ತಂತಿಗಳು ತುಂಡಾಗುವುದು ಹಾಗೂ ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಅವಘಡಗಳು ಸಂಭವಿಸದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಸಾರ್ವಜನಿಕರು ಕೂಡ ಜೆಸ್ಕಾಂ ನೀಡುವ ಸಲಹೆಗಳನ್ನು ಪಾಲಿಸಬೇಕು’ ಎಂದು ಹೇಳಿದರು.

‘ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬದ ಪಕ್ಕ, ಪರಿವರ್ತಕ ಹತ್ತಿರ, ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬಾರದು. ವಿದ್ಯುತ್ ಅವಘಡಗಳನ್ನು ತಪ್ಪಿಸಲು ಎಲ್ಲರೂ ಜಾಗೃತಿ ವಹಿಸುವುದು ಅಗತ್ಯ’ ಎಂದರು.

ಎಇಇ ಕಳಕಪ್ಪ, ಅಮರೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಆರ್.ಎಂ.ರೇವಡಿ, 659 ಯೂನಿಯನ್ ಅಧ್ಯಕ್ಷ ಸದಾಶಿವರೆಡ್ಡಿ ಕಾಂಬಳೆ, ರಾಘವೇಂದ್ರ, ಮಂಜುನಾಥ, ಮಲ್ಲಪ್ಪ, ಮಾನಯ್ಯಗೌಡ ಬಿರಾದಾರ, ಪರಮಣ್ಣ ಮೇಟಿ, ದೇವಪ್ಪ ಕಕ್ಕೇರಿ, ಬಸಣ್ಣ ಗುರಿಕಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.