ಕಲಬುರ್ಗಿ: ಎಲ್ಲ ಔದ್ಯಮಿಕ ಕ್ಷೇತ್ರಗಳು ಲಾಕ್‌ಡೌನ್‌ನಿಂದಾಗಿ ಸೊರಗಿ ನೆಲಕ್ಕು ರುಳುತ್ತಿರುವುದರಿಂದ ಉದ್ಯೋಗಾ ವಕಾಶಗಳೂ ಕಡಿಮೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ, ಅದರಲ್ಲೂ ಉದ್ಯೋಗ ಹುಡುಕಿಕೊಂಡು ಗುಳೆ ಹೋಗಿದ್ದವರ ಕೈಹಿಡಿದದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ.

ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈ 27ರವರೆಗೆ, ಅಂದರೆ ನಾಲ್ಕೇ ತಿಂಗಳಲ್ಲಿ 89,533 ಜನರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್‌ಗಳನ್ನು ನೀಡಿ ಉದ್ಯೋಗ ಕಲ್ಪಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 58,580 ಜನರಿಗೆ ಉದ್ಯೋಗ ಖಾತ್ರಿ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಮುಂಬೈ, ಪುಣೆ, ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಕೆಲಸಕ್ಕೆಂದು ಹೋಗಿದ್ದ ಸುಮಾರು 60 ಸಾವಿರಕ್ಕೂ ಅಧಿಕ ಜನರು ವಾಪಸ್ ಬಂದಿದ್ದು, ಅದರಲ್ಲಿ ಬಹುತೇಕ ಜನರು ಗ್ರಾಮೀಣ ಪ್ರದೇಶಗಳಿಗೇ ಸೇರಿದವರು. ಅವರ ಕೊರೊನಾ ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಜಾಬ್ ಕಾರ್ಡ್‌ಗಳನ್ನು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದರಂತೆಯೇ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಆಸಕ್ತಿ ವಹಿಸಿ ಅರ್ಜಿ ಸಲ್ಲಿಸಿದ ತಕ್ಷಣವೇ ಜಾಬ್ ಕಾರ್ಡ್‌ಗಳನ್ನುನೀಡುತ್ತಿದ್ದಾರೆ. ಹೀಗಾಗಿ, ನಾಲ್ಕೇ ತಿಂಗಳಲ್ಲಿ 89,533 ಜನರಿಗೆ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗ ಕಾರ್ಡ್ ನೀಡಲು ಸಾಧ್ಯವಾಗಿದೆ.

ಮೈತುಂಬಿದ ಕೆರೆಗಳು: ನಿರೀಕ್ಷೆಗಿಂತಲೂ ಅಧಿಕ ಪ್ರಮಾಣದಲ್ಲಿ ಜಾಬ್ ಕಾರ್ಡ್‌ಗಳನ್ನು ನೀಡಿದ್ದರಿಂದ ಬಿಡಿ ಕೆಲಸಗಳ ಬದಲು ಬೃಹತ್ ಕೆರೆಗಳನ್ನು ಹೂಳೆತ್ತುವ ಕೆಲಸಗಳನ್ನು ನೀಡಲಾಗಿತ್ತು. ಕಲಬುರ್ಗಿ ತಾಲ್ಲೂಕಿನ ಸೈಯದ್ ಚಿಂಚೋಳಿ,ಹರಸೂರ, ಪಾಳಾ, ಕುಮಶಿ ಹಾಗೂ ಖಾಜಾ ಕೋಟನೂರ ಕೆರೆಗಳನ್ನು ಹೂಳೆತ್ತಲು 3500 ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ವೆಚ್ಚ ಪಾವತಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಸಕಾಲಕ್ಕೆ ಹಣ ಬಿಡುಗಡೆ ಮಾಡಿದ್ದರಿಂದ ಕೆಲಸ ಮಾಡಿದ 15 ದಿನಗಳ ಒಳಗಾಗಿಯೇ ಕೂಲಿಕಾರರ ಖಾತೆಗೆ ಹಣ ಜಮಾ ಆಗಿತ್ತು.

2019–20ರಲ್ಲಿ 33,505 ಮನೆಗಳ 58,580 ಜನರಿಗೆ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗಿತ್ತು. 2020–21ನೇ ಸಾಲಿನ ನಾಲ್ಕು ತಿಂಗಳಲ್ಲಿ89,533 ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ಬರೆದಿದೆ.

‘ಕಲಬುರ್ಗಿ ತಾಲ್ಲೂಕಿನಲ್ಲೇ 3890 ಮನೆಗಳ 7750 ಜನರನ್ನು ಹೊಸದಾಗಿ ಸೇರಿಸಲಾಗಿದೆ. ಇನ್ನೂ ಅರ್ಜಿಗಳು ಬರುತ್ತಲೇ ಇದ್ದು, ಬಂದ ಎಲ್ಲ ಅರ್ಜಿಗಳನ್ನೂ ಆದ್ಯತೆಯ ಮೇಲೆ ಪರಿಶೀಲಿಸಿ ಜಾಬ್ ಕಾರ್ಡ್‌ಗಳನ್ನು ವಿತರಿಸುವಂತೆ ಸೂಚಿಸಲಾಗಿದೆ’ ಎಂದು ಕಲಬುರ್ಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾನಪ್ಪ ಕಟ್ಟಿಮನಿ ತಿಳಿಸಿದರು.

ಜಿಲ್ಲೆಯಲ್ಲಿ ನಾಲ್ಕು ತಿಂಗಳಲ್ಲಿ ಹೊಸದಾಗಿ 89 ಸಾವಿರ ಜನರಿಗೆ ಜಾಬ್ ಕಾರ್ಡ್ ನೀಡಲಾಗಿದೆ. ಇದರಲ್ಲಿ ಬಹುತೇಕ ಜನರು ಬೇರೆ ರಾಜ್ಯಗಳಿಂದ ವಾಪಸಾದ ವಲಸಿಗರೇ ಇದ್ದಾರೆ.
–ಡಾ. ರಾಜಾ ಪಿ., ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಿಇಒ

ಖಾತ್ರಿ: ಜಿಲ್ಲೆಯ ನೋಟ

2,84,668:ಕಳೆದ ವರ್ಷ ಜಾಬ್ ಕಾರ್ಡ್ ನೀಡಲಾದ ಮನೆಗಳ ಸಂಖ್ಯೆ

3,26,371:ಪ್ರಸಕ್ತ ಸಾಲಿನಲ್ಲಿ ಜಾಬ್ ಕಾರ್ಡ್ ಹೊಂದಿದ ಮನೆಗಳು

6,32,938:ಕಳೆದ ಬಾರಿ ಜಾಬ್ ಕಾರ್ಡ್ ಹೊಂದಿದ ಒಟ್ಟು ಸಂಖ್ಯೆ

7,04,089:ಪ್ರಸಕ್ತ ವರ್ಷ ಜಾಬ್ ಕಾರ್ಡ್ ಹೊಂದಿರುವವರ ಒಟ್ಟು ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.