ಕಲಬುರಗಿ: ಎಲ್ ಅಂಡ್ ಟಿ ಕಂಪನಿ ಕಟ್ಟಿಸುತ್ತಿರುವ ಓವರ್ ಹೆಡ್ ಟ್ಯಾಂಕ್‌ನ ಬುನಾದಿಯ ಗುಂಡಿಯಲ್ಲಿ ನಿಂತಿದ್ದ ಮಳೆ ನೀರಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ದುಬೈ ಕಾಲೊನಿಯ ಸಂಜಯ ಗಾಂಧಿ ನಗರದ ಅಭಿಷೇಕ ಸುರೇಶ ಕನ್ನೋಲ್ (12) ಮತ್ತು ಅಜಯ್ ಭೀಮಾಶಂಕರ ನೆಲೋಗಿ (12) ಮೃತರು. ಶನಿವಾರ ಸಂಜೆ ಆಟವಾಡಲು ಹೋಗಿ ಕಾಲು ಜಾರಿ ಬಿದಿದ್ದಾರೆ. ಭಾನುವಾರು ಬೆಳಿಗ್ಗೆ ಗುಂಡಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ ಆಂಡ್ ಟಿ ಕಂಪನಿಯು ನಗರದಲ್ಲಿ 12 ಕಡೆ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸುತ್ತಿದೆ. ದುಬೈ ಕಾಲೊನಿಯಲ್ಲಿ ಸಹ 6 ತಿಂಗಳಿಂದ ಕಾಮಗಾರಿ ನಡೆಸುತ್ತಿದ್ದು, ಕೆಲವು ದಿನಗಳಿಂದ ಕೆಲಸ ಸ್ಥಗಿತಗೊಳಿಸಿತ್ತು. ಸುಮಾರು 15 ಅಡಿ ಗುಂಡಿಯನ್ನು ಅಗೆದು, ಟ್ಯಾಂಕ್‌ನ ಕಾಲಂ ಹಾಕಿ ಸುತ್ತಲಿನೆ ತಗ್ಗು ಮುಚ್ಚದೆ ಹಾಗೆಯೇ ಬಿಟ್ಟಿದೆ. ರಸ್ತೆಯ ಬದಿಯಲ್ಲಿ ಇದ್ದರೂ ಯಾವುದೇ ಸೂಚನ ಫಲಕ ಹಾಕಿಲ್ಲ. ನಿರಂತರ ಮಳೆಗೆ ಗುಂಡಿ ಭರ್ತಿಯಾಗಿದ್ದು, ಆಟವಾಡಲು ಹೋದ ಮಕ್ಕಳು ಅದರಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇದು ಕಂಪನಿಯ ನಿರ್ಲಕ್ಷ್ಯ ಎಂಬುದು ಸ್ಥಳೀಯರ ಆರೋಪ.

₹10 ಲಕ್ಷ ಪರಿಹಾರದ ಭರವಸೆಯನ್ನು ಲಿಖಿತವಾಗಿ ನೀಡುವಂತೆ ಕುಟುಂಬಸ್ಥರು ಪಟ್ಟುಹಿಡಿದರು. ಪಾಲಿಕೆ ಅಧಿಕಾರಿಗಳು ಆಶ್ವಾಸನ ಕೊಟ್ಟ ಬಳಿಕ ಬಾಲಕರ ಶವ ತೆಗೆದುಕೊಂಡು ಹೋಗಲಾಯಿತು.

ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.