ಕಲಬುರಗಿ: ‘ಕ್ಯಾಲಿಗ್ರಫಿ ಹುಟ್ಟಿದ್ದೇ ಚಿತ್ರಕಲಾವಿದರಿಂದ. ಚಿತ್ರಕಲೆಗೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವಿದೆ’ ಎಂದುಹಿರಿಯ ಚಿತ್ರಕಲಾವಿದ ವಿ.ಜಿ. ಅಂದಾನಿ ಹೇಳಿದರು.

ನಗರದ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಆರ್ಟ್‌ಗ್ಯಾಲರಿ ಆಯೋಜಿಸಿದ ಕಲಾವಿದ ಶೇಖ್ ಅಹಸಾನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕಲಾವಿದ ಶೇಖ್ ಅಹಸಾನ್ ಅವರ ಪೇಂಟಿಂಗ್‌ಗಳಲ್ಲಿ ಕ್ಯಾಲಿಗ್ರಫಿಯ ಸೌಂದರ್ಯ ಸೊಗಡು ಹೆಚ್ಚಿಸಿರುವುದು ಪ್ರಶಂಸನೀಯ’ ಎಂದರು.

ಸಮಾರಂಭ ಉದ್ಘಾಟಿಸಿದ ಶೇಖ್ ಇಮ್ತಿಯಾಜುದ್ದಿನ್ ಅವರು, ಪ್ರದರ್ಶನ ಪ್ರಶಂಸನೆಗೆ ಪಾತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಡಾ.ದಿಲ್‍ನಾಜ್ ಮುಜೀಬ್, ಕಲಾವಿದ ಮಹ್ಮದ್ ಆಯಾಜೋದ್ದೀನ್ ಪಟೇಲ್ ಮಾತನಾಡಿದರು.ಹಿರಿಯ ಚಿತ್ರಕಲಾವಿದ ಎಸ್.ಎಂ.ನೀಲಾ, ರಾಜಶೇಖರ ಚಂದ್ರಹಾಸ ಜಾಲಿಹಾಳ, ಶಶಿಕಾಂತ ಮಾಶಳಕರ್, ಹಣಮಂತ ಮಂತಟ್ಟಿ, ಬಸವರಾಜ ಜಾನೆ, ಲೋಕಯ್ಯ ಮಠಪತಿ, ಸಂತೋಷ ರಾಠೋಡ, ರಾಮಗಿರಿ ಪೋಲಿಸ ಪಾಟೀಲ, ಗಿರೀಶ ಕುಲಕರ್ಣಿ, ರೇವಣಸಿದ್ದಪ್ಪ ಹೊಟ್ಟೆ, ಹಾಜಿ ಮಲ್ಲಂಗ್ ಇದ್ದರು.

ವ್ಯಂಗ್ಯಚಿ ತ್ರಕಲಾವಿದ ಎಂ.ಸಂಜೀವ ನಿರೂಪಿಸಿದರು. ಮಹ್ಮದ್ ಶೆಹಬಾಜ್ ಪ್ರಾರ್ಥನೆ ಗೀತೆ ಹಾಡಿದರು. ರಹೆಮಾನ್ ಪಟೇಲ್ ವಂದಿಸಿದರು. ಈ ಪ್ರದರ್ಶನ ಫೆ. 15ರ ವರೆಗೆ ಬೆಳಿಗ್ಗೆ 11.30ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.