ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛಾಯಾಚಿತ್ರ ಪ್ರದರ್ಶನ: ಬೇರೊಬ್ಬ ಲೇಖಕರ ಭಾವಚಿತ್ರ ಬಳಸಿದ ಕೆಕೆಆರ್‌ಟಿಸಿ

Published : 19 ಸೆಪ್ಟೆಂಬರ್ 2024, 0:06 IST
Last Updated : 19 ಸೆಪ್ಟೆಂಬರ್ 2024, 0:06 IST
ಫಾಲೋ ಮಾಡಿ
Comments

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಮೃತಪಟ್ಟ ಸಾಧಕರ ಬದಲಿಗೆ ಜೀವಂತವಿರುವ ಬೇರೊಬ್ಬ ಲೇಖಕರ ಭಾವಚಿತ್ರವನ್ನು ಬಳಸಿ ಎಡವಟ್ಟು ಮಾಡಿದೆ.

ಕೆಕೆಆರ್‌ಟಿಸಿಯು ‘ದಶಕದ ಸಂಭ್ರಮ’ ಅಡಿ ಸಾಧಕರ, ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಕಥೆಗಾರ ರಾಜಶೇಖರ ನೀರಮಾನ್ವಿ ಅವರ ಭಾವಚಿತ್ರದ ಬದಲಿಗೆ ಬಳ್ಳಾರಿಯ ಲೇಖಕ ಚಂದ್ರಕಾಂತ ವಡ್ಡು ಅವರ ಭಾವಚಿತ್ರವನ್ನು ಬಳಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ರಾಜಶೇಖರ ಅವರು ಕಳೆದ ತಿಂಗಳಷ್ಟೇ ನಿಧನರಾಗಿದ್ದಾರೆ. ಆಯೋಜಕರಿಗೆ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜಶೇಖರ ಅವರ ಭಾವಚಿತ್ರದ ಗುರುತೂ ಸಿಗಲಿಲ್ಲವೆ ಎಂಬ ಆಕ್ರೋಶ ವ್ಯಕ್ತವಾಗಿದೆ.

‘ರಾಜಶೇಖರ ನೀರಮಾನ್ವಿ ಅವರು ನಮ್ಮ ಭಾಗದ ಶ್ರೇಷ್ಠ ಕಥೆಗಾರ. ಪ್ರದರ್ಶನದ ಜವಾಬ್ದಾರಿ ವಹಿಸಿಕೊಂಡವರಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ವ್ಯಕ್ತಿಗಳ ಬಗ್ಗೆ ಪರಿಚಯ ಇರಬೇಕು. ಇದು ರಾಜಶೇಖರ ಅವರಿಗೆ ಮಾಡಿದ ಅಪಮಾನ’ ಎಂದು ಚಂದ್ರಕಾಂತ ವಡ್ಡು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಛಾಯಾಚಿತ್ರ ಪ್ರದರ್ಶನದಲ್ಲಿ ಕಥೆಗಾರ ರಾಜಶೇಖರ ನೀರಮಾನ್ವಿ ಅವರ ಬದಲು ಲೇಖಕ ಚಂದ್ರಕಾಂತ ವಡ್ಡು ಅವರ ಭಾವಚಿತ್ರ ಬಳಸಿಕೊಂಡಿರುವುದು
ಛಾಯಾಚಿತ್ರ ಪ್ರದರ್ಶನದಲ್ಲಿ ಕಥೆಗಾರ ರಾಜಶೇಖರ ನೀರಮಾನ್ವಿ ಅವರ ಬದಲು ಲೇಖಕ ಚಂದ್ರಕಾಂತ ವಡ್ಡು ಅವರ ಭಾವಚಿತ್ರ ಬಳಸಿಕೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT