ಕಲ್ಲಹಂಗರಗಾ– ಜಂಬಗಾ ಕ್ರಾಸ್ ಸಮೀಪದ ಹೆದ್ದಾರಿ ಬದಿಯ ಕಂದಕ
ಕಮಲಾಪುರದ ನರೋಣಾ– ಚಿಂಚನಸೂರ ರಸ್ತೆಯ ದುಸ್ಥಿತಿ
ಅಭಿವೃದ್ಧಿಪಡಿಸಿದ್ದ ರಸ್ತೆಗಳು ಮಳೆಗೆ ಕಿತ್ತುಹೋಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಬಿಲಗುಂದಿ– ದೇಗಾಂವ ನಡುವೆ ಸೇತುವೆ ನಿರ್ಮಾಣಕ್ಕೆ ಬಿ.ಆರ್.ಪಾಟೀಲ ಜತೆಗೆ ಚರ್ಚಿಸುವೆ
ಬಸವರಾಜ ಮತ್ತಿಮಡು ಕಲಬುರಗಿ ಗ್ರಾಮೀಣ ಶಾಸಕ
ಬಿಲಗುಂದಿ–ದೇಗಾಂವ ನಡುವಿನ ಎರಡು ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
ಬಿ.ಆರ್.ಪಾಟೀಲ ಆಳಂದ ಶಾಸಕ
ಮಳೆಯ ಪ್ರವಾಹಕ್ಕೆ ಚಿಂಚನಸೂರ ಸುತ್ತಲಿನ ಗ್ರಾಮಗಳ ಸೇತುವೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೂಡಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
ಪಾಂಡುರಂಗ ಎಂ.ಮಾವಿನಕರ್ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಸಂಚಾಲಕ
‘ರಾಜ್ಯ ಹೆದ್ದಾರಿ ಮೃತ್ಯು ಕೂಪ’
‘ಕಲಬುರಗಿಯಿಂದ ಚಿಂಚನಸೂರ ವರೆಗಿನ ರಾಜ್ಯ ಹೆದ್ದಾರಿ 51 ಮೃತ್ಯು ಕೂಪವಾಗಿದೆ. ಕಲ್ಲಹಂಗರಗಾ ಶಾಲೆಯಿಂದ ಜಂಬಗಾ ಕ್ರಾಸ್‌ವರೆಗಿನ ಹೆದ್ದಾರಿಗೆ ಅಂಟಿಕೊಂಡು ಸುಮಾರು 15 ಅಡಿಯಷ್ಟ ಆಳವಾದ ಕಂದಕಗಳಿವೆ’ ಎನ್ನುತ್ತಾರೆ ಚಿಂಚನಸೂರ ಗ್ರಾಮದ ಮುಖಂಡ ಸುಧಾಮ ಧನ್ನಿ. ‘ಈ ರಸ್ತೆಯಲ್ಲಿ ವಾಹನಗಳು ಸ್ವಲ್ಪವೇ ಆಯತಪ್ಪಿದರೆ ಕಂದಕಕ್ಕೆ ಉರುಳುತ್ತವೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.