ಸೇಡಂ: ತಾಲ್ಲೂಕಿನ ಕುಕ್ಕುಂದಾ ಗ್ರಾಮದ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸೇತುವೆ ತಡೆಗೋಡೆಯು ಪ್ರವಾಹದಿಂದಾಗಿ ಕಿತ್ತುಹೋಗಿ ತಿಂಗಳುಗಳು ಕಳೆದಿವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ, ಆತಂಕದಲ್ಲಿಯೇ ಜನರು ಸಂಚರಿಸುವಂತಾಗಿದೆ.

ಆಗಸ್ಟ್ನಲ್ಲಿ ಸುರಿದ ನಿರಂತರ ಮಳೆ ಹಾಗೂ ಕಾಗಿಣಾ ನದಿ ನೀರಿನ ಪ್ರವಾಹಕ್ಕೆ ಕುಕ್ಕುಂದಾ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸಿಮೆಂಟಿನ ಕಂಬಗಳು, ತಡೆಗೋಡೆ ಕೊಚ್ಚಿ ಹೋಗಿದೆ. ಅಲ್ಲದೆ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳೂ ಕೊಚ್ಚಿಹೋಗಿದ್ದು, ಸೇತುವೆ ಪೂರ್ಣ ಬಯಲಾಗಿದೆ. ಸೇತುವೆ ಮೇಲಿಂದ ಸಂಚರಿಸುವ ಪ್ರಯಾಣಿಕರು ಆತಂಕದಲ್ಲಿಯೇ ಸಂಚರಿಸಬೇಕಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಸಂಬಣ್ಣ ಬೂತ್ಪೂರ ಕಳವಳ ವ್ಯಕ್ತಪಡಿಸಿದರು.

‘ಕುಕ್ಕುಂದಾ ಗ್ರಾಮ ಸೇರಿದಂತೆ ವಿವಿಧೆಡೆಗಳಿಂದ ಬರುವ ಜನರು ಸೇಡಂ ಪಟ್ಟಣಕ್ಕೆ ಇದೇ ಸೇತುವೆ ಮೂಲಕ ತೆರಳಬೇಕಿದೆ. ಪಟ್ಟಣದ ಸಿಮೆಂಟ್ ಕಂಪನಿ, ವ್ಯಾಪಾರ, ಸ್ವಂತ ಉದ್ಯೋಗಕ್ಕೆ ನಿತ್ಯವು ನೂರಾರು ಪ್ರಯಾಣಿಕರು ತೆರಳುತ್ತಾರೆ. ಖಾಸಗಿ ಶಾಲೆಗಳಿಗೆ ಆಟೊದಲ್ಲಿ ವಿದ್ಯಾರ್ಥಿಗಳು ತೆರಳಲು ಇದೇ ಮಾರ್ಗ ಅವಲಂಬಿಸಿ ದ್ದಾರೆ. ಹೀಗಾಗಿ ಶೀಘ್ರ ಸೇತುವೆಯನ್ನು ದುರಸ್ತಿಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ ಕುಕ್ಕುಂದಾ ಆಗ್ರಹಿಸಿದರು.

‘ಹೊಲಗಳಿಗೆ ನಡೆದುಕೊಂಡು ಹೋಗುವ ರೈತರು ಹಾಗೂ ದನಕರುಗಳು ಹಾಗೂ ಎತ್ತಿನ ಬಂಡಿಗಳಿಗೆ ಸುರಕ್ಷತೆ ಎಂಬುವುದೇ ಇಲ್ಲ. ಕಬ್ಬಿಣದ ಸರಳುಗಳು ಕಿತ್ತು ಹೋಗಿವೆ. ಸಿಮೆಂಟ್ ಕಂಬಗಳು ಸೇತುವೆ ಮೇಲೆ ಬಿದ್ದಿವೆ. ತಿಂಗಳುಗಳೇ ಕಳೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೇತುವೆ ಮೇಲೆ ಆದಷ್ಟು ಶೀಘ್ರ ಕಬ್ಬಿಣದ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

₹1.77 ಕೋಟಿ ಅನುದಾನದ ವರದಿ ಸಲ್ಲಿಕೆ

‘ಕುಕ್ಕುಂದಾ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆಗೆ ಭೇಟಿ ನೀಡಲಾಗಿದೆ. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಕುರಿತು ಮಾಹಿತಿಯಿದ್ದು, ಇದೇ ರೀತಿ ಮಳಖೇಡ ಬಳಿ ಹಾಗೂ ಯಡ್ಡಳ್ಳಿ ಸೇತುವೆ ಬಳಿಯೂ ಕೆಲ ಕಡೆ ಪ್ರವಾಹಕ್ಕೆ ರಕ್ಷಣಾ ಕಂಬಗಳು ಕಿತ್ತು ಹೋಗಿವೆ. ಜೊತೆಗೆ ಸೇತುವೆ ಕೆಳಗಡೆ ಇರುವ ಪಿಲ್ಲರ್, ಗೋಡೆ ಒಡೆದಿವೆ. ಕುಕ್ಕುಂದಾ ಸೇತುವೆ ₹87 ಲಕ್ಷ, ಯಡ್ಡಳ್ಳಿ ₹87 ಲಕ್ಷ ಮತ್ತು ಮಳಖೇಡ ₹3 ಲಕ್ಷ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮದನಿಕಾಂತ ಶೃಂಗೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.