ಕಲಬುರಗಿ: ನಗರದ ವಿವಿಧೆಡೆ ಬೈಕ್ಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಬಾಲಕರು ಸೇರಿದಂತೆ 30 ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ₹ 54.55 ಲಕ್ಷ ಮೌಲ್ಯದ 105 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.

‘ಬಂಧಿತ ಆರೋಪಿಗಳು 23ರಿಂದ 30 ವರ್ಷಗಳ ನಡುವಿನ ವಯೋಮಾನದವರು ಇದ್ದಾರೆ. ದುಂದು ವೆಚ್ಚ, ಮದ್ಯ ಕುಡಿತದಂತಹ ದುಶ್ಚಟಗಳಿಗಾಗಿ ಬೈಕ್ಗಳ ಕಳ್ಳತನ ಮಾಡುತ್ತಿದ್ದರು. 30 ಆರೋಪಿಗಳಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ, ಸಿಸಿಟಿವಿ ಕ್ಯಾಮೆರಾ ಇಲ್ಲದ, ಎರಡ್ಮೂರು ದಿನಗಳಿಂದ ಒಂದೇ ಕಡೆ ನಿಂತಿದ್ದ, ಹ್ಯಾಂಡ್ ಲಾಕ್ ಹಾಕದ, ಕೀಗಳನ್ನು ಬಿಟ್ಟು ಹೋದ ಬೈಕ್ಗಳನ್ನು ಕದ್ದಿದ್ದಾರೆ’ ಎಂದರು.

‘ಎರಡ್ಮೂರು, ನಾಲ್ಕೈದ ಮಂದಿ ಇರುವ ತಂಡಗಳು ಬೈಕ್ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದವು. ಅದರಲ್ಲಿ ರೂಢಿಗತ ಕಳ್ಳರೂ ಇದ್ದಾರೆ. ಬೈಕ್ ಕದಿಯಲು, ಗ್ರಾಮೀಣ ಭಾಗಕ್ಕೆ ಸಾಗಿಸಲು ಹಾಗೂ ಗ್ರಾಮೀಣ ಭಾಗದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರತ್ಯೇಕವಾಗಿ ವಿಭಾಗ ಮಾಡಿಕೊಂಡಿದ್ದರು. ಅವರೆಲ್ಲರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಮಾರಾಟ: ‘ಸೆಕೆಂಡ್ ಹ್ಯಾಂಡ್ ಬೈಕ್ಗಳು ₹60 ಸಾವಿರದಿಂದ ₹70 ಸಾವಿರಕ್ಕೆ ಮಾರಾಟ ಆಗುತ್ತವೆ. ಆದರೆ, ಆರೋಪಿಗಳು ಗ್ರಾಮೀಣ ಭಾಗದಲ್ಲಿ ₹10 ಸಾವಿರದಿಂದ ₹20 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಖರೀದಿದಾರರು ಸರಿಯಾಗಿ ಪರಿಶೀಲನೆ ಮಾಡುತ್ತಿರಲಿಲ್ಲ’ ಎಂದರು.

‘ಕೆಲವರು ಬೈಕ್ಗಳಲ್ಲಿನ ಜೆರಾಕ್ಸ್ ಪ್ರತಿ, ತಮ್ಮ ಸಂಬಂಧಿಕರ ಹೆಸರಿನಲ್ಲಿನ ದಾಖಲೆಗಳು, ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದರೆ ಅವುಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಅನುಮಾನ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಬೈಕ್ಗಳ ಸುರಕ್ಷತೆಗಾಗಿ ಬಸ್, ರೈಲು ನಿಲ್ದಾಣಗಳ ಪಾವತಿ ಪಾರ್ಕಿಂಗ್ನಲ್ಲೇ ನಿಲ್ಲಿಸಬೇಕು. ಜಿಪಿಎಸ್, ಗಾಲಿ ಲಾಕರ್, ಪೆಟ್ರೋಲ್ ಟ್ಯಾಂಕ್ ಲಾಕರ್ಗಳನ್ನು ಬಳಸಿ, ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿಕೊಳ್ಳಬೇಕು. ಅಗತ್ಯವಿದ್ದರೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಶೇಷ ತಂಡ ರಚನೆ: ‘ಬೈಕ್ ಕಳ್ಳತನ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಬೈಕ್ ಕಳ್ಳತನದ 37 ಪ್ರಕರಣಗಳನ್ನು ಭೇದಿಸುವಲ್ಲಿ ತಂಡಗಳು ಯಶಸ್ವಿಯಾಗಿವೆ’ ಎಂದು, ತಂಡದಲ್ಲಿದ್ದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸೆ ಪತ್ರಗಳನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ ಉಪಸ್ಥಿತರಿದ್ದರು.

ರೌಡಿಶೀಟರ್ ಕೊಲೆ: ಮೂವರ ಬಂಧನ

‘ರೌಡಿಶೀಟರ್ ಸೋಮು ತಾಳಿಕೋಟಿ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು ಇನ್ನೂ ಮೂವರನ್ನು ಬಂಧಿಸಬೇಕಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು. ‘ಸೋಮು ಮೇಲೆ ಬೇರೊಂದು ಕಡೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಗಳು ರೈಲ್ವೆ ಸೇತುವೆ ಬಳಿ ಶವ ಎಸೆದು ಪರಾರಿಯಾಗಿದ್ದಾರೆ. ತಲೆ ಮರೆಸಿಕೊಂಡಿದ್ದವರ ಪೈಕಿ ಮೂವರನ್ನು ಬಂಧಿಸಲಾಗಿದೆ. ಉಳಿದವರ ಬಂಧಿಸಿದ ಬಳಿಕ ಕೊಲೆಗೆ ನೈಜ ಕಾರಣ ತಿಳಿದುಬರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.