ಕಲಬುರಗಿ: ‘ರೈತರು, ಮಠ–ಮಂದಿರಗಳು ಸೇರಿದಂತೆ ಹಿಂದೂಗಳ ಜಮೀನುಗಳ ಪಹಣಿಯ ಕಾಲಂ ನಂ.11ರಲ್ಲಿ ವಕ್ಫ್ ಹೆಸರು ನಮೂದಿಸಿರುವುದನ್ನು ಖಂಡಿಸಿ ನ.11ರಂದು ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ ನಡೆಸಲಾಗುವುದು’ ಎಂದು ಹಿಂದೂ ನಾಗರಿಕ ವೇದಿಕೆ ತಿಳಿಸಿದೆ.

ಪಕ್ಷಾತೀತ ಹೋರಾಟದ ಕುರಿತು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಿಂದೂ ನಾಗರಿಕ ವೇದಿಕೆಯಿಂದ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಸಭೆಯಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಪಾಲ್ಗೊಂಡಿದ್ದರು. ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಸ್ವಾಮೀಜಿಗಳಿಗೆ ತಿಳಿಸಲಾಗಿದೆ. ಅಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪಾದಯಾತ್ರೆ ನಡೆಸಿ ವಕ್ಫ್ ಮಂಡಳಿಯಿಂದ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಕೋರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗುವುದು’ ಎಂದು ಹಿಂದೂ ನಾಗರಿಕ ವೇದಿಕೆ ಕಲಬುರಗಿಯ ಪ್ರಧಾನ ಸಂಚಾಲಕ ಎಂ.ಎಸ್.ಪಾಟೀಲ ನರಿಬೋಳ, ಸಂಚಾಲಕ ಲಕ್ಷ್ಮೀಕಾಂತ ಸ್ವಾದಿ, ಸಹ ಸಂಚಾಲಕರಾದ ಅನುದೀಪ ದಂಡೋತಿ ಹಾಗೂ ಮಹೇಶ ಕೆಂಬಾವಿ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಮುಖರಾದ ಭೀಮಶೆಟ್ಟಿ ಮುಕ್ಕಾ, ಸಿದ್ದರಾಮಯ್ಯ ಹಿರೇಮಠ, ಸಂಪತ್ ಹಿರೇಮಠ, ಮಲ್ಲಿಕಾರ್ಜುನ ಧೋಲೆ, ವೀರಣ್ಣ ಬೇಲೂರೆ, ಸುನೀಲ ಶಿರ್ಕೆ, ಸಂಗು ಕಾಳನೂರ, ಉದಯ ಸುಲ್ತಾನಪುರ, ತಾತಾಗೌಡ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.