ಮಹಾರಾಜ ತಳಿಯ ಭತ್ತವನ್ನು ಒಂದೂವರೆ ಎಕರೆಯಲ್ಲಿ ಬಿತ್ತನೆ ಮಾಡಿದ್ದೇವೆ. ನಾಟಿ ಕೆಲಸಗಳು ಸೇರಿ ಒಟ್ಟು 40 ಸಾವಿರ ಖರ್ಚು ತಗಲಿದ್ದು ಕಟಾವಿನ ಹಂತಕ್ಕೆ 60 ಸಾವಿರ ವೆಚ್ಚ ತಲುಪುವ ಸಾಧ್ಯತೆ ಇದೆ. ಮಳೆ ಇಲ್ಲದೆ ಪಂಪ್‌ಸೆಟ್ ಮೂಲಕ ನೀರು ನೀಡಿ ಭತ್ತ ಬೆಳೆಯುತ್ತಿದ್ದೇವೆ.
ಡಿ.ಪಿ.ಮಾದಪ್ಪ, ರೈತ, ಹೆಗ್ಗಳ ಗ್ರಾಮ
ಮಳೆ ಬಾರದೆ ರೈತರ ಭತ್ತದ ಪೈರುಗಳಿಗೆ ಕೀಟಗಳು ಆವರಿಸಿವೆ ಎನ್ನುವ ಮಾಹಿತಿ ದೊರೆತಿದೆ. ರೈತ ಸಂಪರ್ಕ ಕೇಂದ್ರದಿಂದ ಕೀಟಗಳ ಬಾಧೆಯನ್ನು ನಿವಾರಣೆ ಮಾಡಲು ಸರ್ಕಾರದ ಸಹಾಯಧನದೊಂದಿಗೆ ಕೀಟನಾಶಕವನ್ನು ವಿತರಣೆ ಮಾಡಲಾಗುತ್ತಿದೆ.
ಯಾದವ್ ಬಾಬು, ಸಹಾಯಕ ಕೃಷಿ ನಿರ್ದೇಶಕ
ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಭಾಗದಲ್ಲಿ ಭತ್ತದ ಬೆಳೆಗೆ ಎದುರಾಗಿರುವ ಕೀಟಗಳನ್ನು ತಡೆಯಲು ರೈತರು ಕೀಟನಾಶಕ ಸಿಂಪಡಿಸುತ್ತಿರುವುದು