ಸೋಮವಾರಪೇಟೆ: ‘ಬೆಳೆಗಾರರು ಸಾವಯವ ಕೃಷಿಯೊಂದಿಗೆ ಗುಣಮಟ್ಟದ ಕಾಫಿ ಉತ್ಪಾದನೆ ಮಾಡಿದರೆ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಕಾಫಿಗೆ ಉತ್ತಮ ದರ ಸಿಗುತ್ತದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.

ಕಾಫಿ ಮಂಡಳಿಯಿಂದ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾಫಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಾಫಿ ಕೃಷಿಯ ಬಗ್ಗೆ ರೈತರು ನಿರಂತರವಾಗಿ ಅಧ್ಯಯನ ಮಾಡಬೇಕು. ವೈಜ್ಞಾನಿಕ ಮಾದರಿಯಲ್ಲೇ ಕೃಷಿ ಮತ್ತು ಸಂಸ್ಕರಣೆ ಮಾಡುವುದನ್ನು ಕಲಿತರೆ ಗುಣಮಟ್ಟದ ಕಾಫಿ ಉತ್ಪಾದಿಸಲು ಸಾಧ್ಯ’ ಎಂದರು.

‘ಕೂತಿ ಗ್ರಾಮದಲ್ಲಿ ರೈತ ಉತ್ಪಾದಕ ಸಂಘವನ್ನು ಪ್ರಾರಂಭಿಸಿದರೆ ಕಾಫಿ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ರೈತರು ಕೂಡ ಕಾಫಿ ಮಂಡಳಿಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾಫಿ ಡ್ರೈಯರ್ ಅವಶ್ಯವಾಗಿ ಅಳವಡಿಸಿಕೊಳ್ಳಬೇಕು. ಕಾಫಿ ಮಂಡಳಿಯಿಂದ ಶೇ 75ರಷ್ಟು ಸಬ್ಸಿಡಿ ದೊರೆಯಲಿದೆ’ ಎಂದು ಹೇಳಿದರು.

‘ಕಾಫಿ ಸಂರಕ್ಷಣೆಯಲ್ಲಿ ಗುಣಮಟ್ಟ ಸುಧಾರಣೆ’ ಕುರಿತು ಬಾಳೆಹೊನ್ನೂರು ಕಾಫಿ ಮಂಡಳಿ ವಿಜ್ಞಾನಿ ಗೋಪಿನಂದನ್ ಮಾತನಾಡಿ, ‘ಉತ್ತಮ ತಳಿಯ ಹಣ್ಣಿನ ಬೀಜವನ್ನು ಅಯ್ಕೆ ಮಾಡಿಕೊಂಡು ಸಸಿಯನ್ನು ಬೆಳೆದು ನೆಟ್ಟರೆ ಮಾತ್ರ ಉತ್ತಮ ಫಸಲು ಪಡೆಯಬಹುದು. ಕಾಫಿ ಹಣ್ಣು ಕೊಯ್ಲು ಮಾಡಿದ ದಿನದಂದೇ ಪಲ್ಪಿಂಗ್ ಮಾಡಿದರೆ, ಕಾಫಿಯ ಗುಣಮಟ್ಟ ಕಾಯ್ದುಕೊಳ್ಳಬಹುದು. ಸೂಕ್ತ ಸ್ಥಳದಲ್ಲಿ ಒಣಗಲು ಹಾಕಿ, ಗಂಟೆಗೊಮ್ಮೆ ಹರಡಬೇಕು. ಸಮ ಪ್ರಮಾಣದಲ್ಲಿ ಒಣಗಿಸಿದ ಕಾಫಿಯನ್ನು ಚೀಲದಲ್ಲಿ ತುಂಬಿ ಮರದ ಹಲಗೆಯ ಮೇಲೆ ಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ಒಂದು ಟನ್ ಕಾಫಿ ಹಣ್ಣಿನಿಂದ 200ರಿಂದ 250 ಕೆ.ಜಿ. ಪಾರ್ಚ್ಮೆಂಟ್ ಕಾಫಿ ಸಿಗಲಿದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ವಿ.ಚಂದ್ರಶೇಖರ್, ಪ್ರಗತಿಪರ ಕೃಷಿಕ ಎಚ್.ಎಸ್. ಧರ್ಮರಾಜ್, ಮಣ್ಣು ವಿಜ್ಞಾನಿ ಎಸ್.ಎ.ನಡಾಫ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್, ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯರಾಮ್ ಇದ್ದರು.

ಕಾಫಿ ಕೃಷಿ ಬಗ್ಗೆ ನಿರಂತರ ಅಧ್ಯಯನ ನಡೆಸಿ ಗುಣಮಟ್ಟದ ಕಾಫಿ ಉತ್ಪಾದಿಸಲು ಸಲಹೆ ಕಾಫಿ ಡ್ರೈಯರ್ಗೆ ಶೇ 75ರಷ್ಟು ಸಬ್ಸಿಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.