ಸುಂಟಿಕೊಪ್ಪ: ಇಲ್ಲಿನ ಸುನ್ನಿ ಶಾಫಿ ಮುಸ್ಲಿಂ ಜಮಾಅತ್ ಮದರಸದಲ್ಲಿ ಈದ್ ಮಿಲಾದ್ ಅಂಗವಾಗಿ ಶುಕ್ರವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇಲ್ಲಿನ ಈದ್ ಮಿಲಾದ್ ಆಚರಣಾ ಸಮಿತಿಯಿಂದ ಮಕ್ಕಳಿಗೆ ಭಾಷಣ, ದಫ್, ನೃತ್ಯ, ಪ್ರವಾದಿಗಳ ಬಗ್ಗೆ ಉಪನ್ಯಾಸ ಸ್ಪರ್ಧೆ ನಡೆಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನು ಮನರಂಜಿಸಿತು. ಶನಿವಾರ ಬೆಳಿಗ್ಗೆ ಎಲ್ಲ ಮದರಸಗಳ ಮಕ್ಕಳಿಂದ ದಫ್ ಸ್ಪರ್ಧೆ ಮತ್ತು ತರಬೇತಿ ನಡೆದವು.

ಸುನ್ನಿ ಶಾಪಿ ಜುಮ್ಮಾ ಮಸೀದಿಯ ಮುಖ್ಯಸ್ಥರು ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಮಸೀದಿಯಾ ಅಧ್ಯಕ್ಷ ರಫೀಕ್, ಮಾಜಿ ಪ್ರಧಾನ ಕಾರ್ಯದರ್ಶಿ ಸೂಫಿ, ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಜಿ, ಇಕ್ಬಾಲ್ ಮೌಲವಿ, ಮಿಲಾದ್ ಆಚರಣಾ ಸಮಿತಿಯ ಅಧ್ಯಕ್ಷ ಆಸಿಫ್ ಹಾಗೂ ಪ್ರಮುಖರು ಹಾಜರಿದ್ದರು.

ಮೆರವಣಿಗೆ ನಾಳೆ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ಹಲವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಆ ನಂತರ ಪಟ್ಟಣದಲ್ಲಿ ವಿದ್ಯಾರ್ಥಿಗಳ ವೈವಿಧ್ಯಮಯ ದಫ್ ಮೆರವಣಿಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.