ಸೋಮವಾಪೇಟೆ: ಈ ಜಲಪಾತ ಇನ್ನಿತರ ಜಲಪಾತಗಳಂತೆ ಎತ್ತರದಿಂದ ಧುಮ್ಮಿಕ್ಕುವುದಿಲ್ಲ. ಬಂಡೆಗಳ ನಡುವೆ ಅಂಕುಡೊಂಕಿನ ಹಾದಿಯಲ್ಲಿ ಬೆಳ್ನೊರೆಯಂತೆ ಧರೆಗಿಳಿಯುವುದಿಲ್ಲ. ಆದರೂ, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಸೌಂದರ್ಯ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ಗ್ರಾಮದ ಅಜ್ಜಳ್ಳಿ ಜಲಪಾತಕ್ಕಿದೆ.

ಇದೊಂದು ಪುಟ್ಟ ಜಲಪಾತ. ಆದರೂ, ಇದರ ಸೌಂದರ್ಯ ಮೇರು ಜಲಪಾತಗಳಿಗಿಂತ ಏನೂ ಕಡಿಮೆ ಇಲ್ಲ. ಮುಂಗಾರಿನ ಅವಧಿಯಲ್ಲಿ ಮಳೆ ಬಿರುಸುಗೊಳ್ಳುತ್ತಿದ್ದಂತೆ ನವಿಲು ತನ್ನ ಗರಿಗಳನ್ನು ಬಿಚ್ಚಿದಂತೆ ಒಮ್ಮಿಂದೊಮ್ಮೆಗೆ ತನ್ನ ಸೌಂದರ್ಯವನ್ನು ಈ ಜಲಪಾತ ಪ್ರದರ್ಶಿಸುತ್ತದೆ. ಇಂತಹ ಸೌಂದರ್ಯಕ್ಕೆ ಮಾರು ಹೋಗದ ಮನಸ್ಸುಗಳೇ ಇಲ್ಲ ಎನ್ನುವಂತಿದೆ ಇದರ ಸೊಬಗು.

ಅಂದ ಹಾಗೆ, ಇದು ಇನ್ನೂ ಎಲೆಮರೆಯ ಕಾಯಂತಿದೆ. ಹೊರಜಗತ್ತಿಗೆ, ಹೆಚ್ಚಿನ ಮಂದಿಗೆ ಈ ಜಲಪಾತದ ಹೆಸರೂ ತಿಳಿದಿಲ್ಲ. ಆದರೆ, ಸ್ಥಳೀಯ ಪ್ರಕೃತಿ ಪ್ರಿಯರಿಗೆ ಈ ಜಲಪಾತವೆಂದರೆ ಅಚ್ಚುಮೆಚ್ಚು.

ಸುಳಿಮಳ್ತೆಯಲ್ಲಿ ಪ್ರಾರಂಭವಾಗಿ ಹೊನ್ನವಳ್ಳಿ, ಕೂಗೇಕೋಡಿ, ಶುಂಟಿ ಗ್ರಾಮಗಳಲ್ಲಿ ಹರಿಯುವ ತೊರೆ, ಅಜ್ಜಳ್ಳಿ ಗ್ರಾಮದಲ್ಲಿ ಈ ವೈಭವದ ಜಲಪಾತವನ್ನು ಸೃಷ್ಟಿಸುತ್ತದೆ. ನಂತರ ಶನಿವಾರಸಂತೆ, ಕೊಡ್ಲಿಪೇಟೆ ಮೂಲಕ ಹರಿದು ಹೇಮಾವತಿ ಜಲಾಶಯದ ಹಿನ್ನೀರಿಗೆ ಸೇರುತ್ತದೆ.

ಪ್ರಚಾರದ ಕೊರತೆಯಿಂದ ಈ ಜಲಪಾತ ಜನರಿಂದ ಇಂದಿಗೂ ದೂರವಾಗಿದೆ. ಸೋಮವಾಪೇಟೆ ಪಟ್ಟಣದಿಂದ ಬೀಟಿ ಕಟ್ಟೆ ಗ್ರಾಮದ ಮೂಲಕ ಈಚಲಬೀಡು ಮಾರ್ಗವಾಗಿ ಶನಿವಾರಸಂತೆಗೆ ತೆರಳುವ ದಾರಿಯಲ್ಲಿನ ಅಜ್ಜಳ್ಳಿಯಲ್ಲಿ ಈ ಜಲಪಾತ ಸಿಗುತ್ತದೆ. ಮುಖ್ಯ ರಸ್ತೆಯಿಂದ ಅರ್ಧ ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ತೆರಳಿದರೆ ಅಪಾರ ಸೌಂದರ್ಯದ ಈ ಜಲಪಾತ ಎದುರಾಗುತ್ತದೆ.

‘ಕೊಡಗಿನಲ್ಲಿ ಜಲಪಾತಗಳಿಗೆ ಬರ ಇಲ್ಲ. ಆದರೆ, ಅವುಗಳ ಪರಿಚಯ ಇನ್ನೂ ಆಗದಿರುವುದರಿಂದ ಜನರಿಂದ ದೂರವಾಗಿವೆ. ಜಿಲ್ಲೆಯಲ್ಲಿನ ಎಲ್ಲ ಜಲಪಾತಗಳ ಪೂರ್ಣ ಮಾಹಿತಿಯನ್ನು ಪ್ರವಾಸಿಗರಿಗೆ ನೀಡಿದಲ್ಲಿ, ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಕರೆತರಬಹುದು’ ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಅಜ್ಜಳ್ಳಿ ತಿಳಿಸಿದರು.

ಇಂತಹುದೇ ಪ್ರಚಾರ ಕೊರತೆಯಿಂದ ಎಲೆಮರೆಯಲ್ಲೇ ಈ ಜಲಪಾತ ಸದ್ದಿಲ್ಲದೇ ಹರಿಯುತ್ತಿದೆ. ಸುಮಾರು 15 ಅಡಿ ಎತ್ತರದಿಂದ ಈ ಜಲಧಾರೆ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಈ ಜಲಪಾತದ ಭೋರ್ಗರೆತದ ನಾದಕ್ಕೆ ಸೋಲದವರೇ ಇಲ್ಲ.

ಕೊಡಗಿನಲ್ಲಿ ಮಳೆಗಾಲ ಮತ್ತು ಜಲಪಾತಗಳಿಗೆ ಗಾಢ ಸಂಬಂಧ ಇದೆ. ಮುಂಗಾರು ಮಳೆ ರಭಸವಾಗಿ ಬಿದ್ದಷ್ಟು ಜಲಪಾತಗಳ ಸಂಖ್ಯೆ ಮತ್ತು ಅದರ ಸೊಬಗು ಹೆಚ್ಚಾಗುತ್ತಾ ಸಾಗುವುದರೊಂದಿಗೆ ನೋಡುಗರಿಗೆ ಒಂದಿಲ್ಲೊಂದು ರೀತಿಯ ಆಹ್ಲಾದ ನೀಡುವುದರಲ್ಲಿ ಪೈಪೋಟಿ ಎದುರಿಸುತ್ತವೆ. ಕೆಲವು ಜಲಪಾತಗಳು ಜನರಿಗೆ ಹತ್ತಿರವಾದರೂ, ಸಾಕಷ್ಟು ಜಲಪಾತಗಳು ಇಂದಿಗೂ ಬಹುದೂರವಾಗಿವೆ. ಕೆಲವನ್ನು ಸ್ಥಳಕ್ಕೆ ತೆರಳಿ ವೀಕ್ಷಿಸಬಹುದಾಗಿದೆ. ಇನ್ನೂ ಕೆಲವು ಸರಿಯಾದ ಮಾರ್ಗ ಮತ್ತು ವ್ಯವಸ್ಥೆಯಿಲ್ಲದೆ ಜನರಿಂದ ದೂರವಾಗಿ ಸದ್ದಿಲ್ಲದೆ ಹರಿಯುತ್ತಿದೆ. ಈ ಜಲಪಾತವೂ ಅಂತಹ ಜಲಪಾತಗಳ ಸಾಲಿಗೆ ಸೇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.