ಮಡಿಕೇರಿ: ಕೊಡಗು ಜಿಲ್ಲೆಯ ಸಾಕಾನೆ ಶಿಬಿರಗಳಲ್ಲಿ ಹೆಣ್ಣಾನೆಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದು ಗಂಡಾನೆಗಳ ನಡುವಿನ ಕಲಹಕ್ಕೆ ಕಾರಣವಾಗಿದೆ ಎಂದು ಮಾವುತರು ಹೇಳುತ್ತಾರೆ.

ಜಿಲ್ಲೆಯ ದುಬಾರೆಯಲ್ಲಿ 26, ಹಾರಂಗಿಯಲ್ಲಿ 6, ಮತ್ತಿಗೋಡುವಿನಲ್ಲಿ 11 ಸಾಕಾನೆಗಳಿವೆ. ಇವುಗಳ ಪೈಕಿ ದುಬಾರೆಯಲ್ಲಿ 3, ಮತ್ತಿಗೋಡುವಿನಲ್ಲಿ 2 ಹೆಣ್ಣಾನೆಗಳು ಮಾತ್ರವೇ ಇವೆ. ದುಬಾರೆ ಯಲ್ಲಿರುವ 3 ಹೆಣ್ಣಾನೆಗಳ ಪೈಕಿ 2ಕ್ಕೆ ವಯಸ್ಸಾಗಿದ್ದರೆ, ಮತ್ತೊಂದು ಮರಿಯಾನೆ. ಹಾಗೆಯೇ, ಮತ್ತಿಗೋಡು ವಿನಲ್ಲಿರುವ ಎರಡೂ ಹೆಣ್ಣಾನೆಗಳು ಮರಿಯಾನೆಗಳೇ ಆಗಿವೆ. ಹಾರಂಗಿಯಲ್ಲಿ ಒಂದೇ ಒಂದು ಹೆಣ್ಣಾನೆಯೂ ಇಲ್ಲ.

‘ಇದರಿಂದ ಗಂಡಾನೆಗಳ ನಡುವೆ ಕಾದಾಟ, ಕಲಹಗಳು ದಿನಂಪ್ರತಿ ಹೆಚ್ಚುತ್ತಿವೆ. ಈ ಆನೆಗಳನ್ನು ನಿಯಂತ್ರಿಸು ವಲ್ಲಿ ಮಾವುತರು ಮತ್ತು ಕಾವಾಡಿಗಳು ಹೈರಾಣಾಗುತ್ತಿದ್ದಾರೆ. ತುರ್ತಾಗಿ ಸದೃಢ ಹೆಣ್ಣಾನೆಗಳ ಅಗತ್ಯ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಾವುತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾನುವಾರವಷ್ಟೇ ಧನಂಜಯ ಮತ್ತು ಕಂಜನ್ ನಡುವೆ ಕಾದಾಟ ಏರ್ಪಟ್ಟಿತ್ತು. ಇದರಿಂದ ಪ್ರವಾಸಿಗರಲ್ಲಿ ಮಾತ್ರವಲ್ಲ ಅರಣ್ಯಾಧಿಕಾರಿಗಳಲ್ಲೂ ಆತಂಕ ಸೃಷ್ಟಿಯಾಗಿತ್ತು. ಒಂದು ವೇಳೆ ಇರುವ ಗಂಡಾನೆಗಳಿಗೆ ಸಾಕಾಗುವಷ್ಟು ಸದೃಢ ಹೆಣ್ಣಾನೆಗಳು ಇದ್ದರೆ ಇಂತಹ ಕಾದಾಟ, ಕಲಹಗಳು ಉಂಟಾಗುವು ದಿಲ್ಲ’ ಎಂದು ಅರಣ್ಯಾಧಿಕಾರಿಗಳೇ ಹೇಳುತ್ತಾರೆ.

‘ಮೈಸೂರು ಜಿಲ್ಲೆಯ ಶಿಬಿರಗಳಲ್ಲೂ ವಿರಳ ಸಂಖ್ಯೆಯಲ್ಲೇ ಹೆಣ್ಣಾನೆಗಳಿವೆ. ಆದರೆ, ಬನ್ನೇರುಘಟ್ಟದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣಾನೆಗಳಿದ್ದು, ಅಲ್ಲಿಂದ ಕೆಲವೊಂದನ್ನು ಕೊಡಗಿನ ಶಿಬಿರಗಳಿಗೆ ಕಳುಹಿಸಿಕೊಡುವಂತೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಶುವೈದ್ಯ ಬಿ.ಸಿ.ಚೆಟ್ಟಿಯಪ್ಪ, ‘ಹೆಣ್ಣಾನೆ ಗಳು ಇರಬೇಕು ನಿಜ. ಆದರೆ, ಅವು ಇದ್ದ ಮಾತ್ರಕ್ಕೆ ಎಲ್ಲ ಗಂಡಾನೆಗಳೂ ಸರಿಯಾಗಿರುತ್ತವೆ ಎಂದು ಹೇಳುವು ದಕ್ಕಾಗುವುದಿಲ್ಲ. ಮದವೇರಿದ ಆನೆ ಗಳನ್ನು ಜೋಪಾನವಾಗಿ, ಪ್ರತ್ಯೇಕವಾಗಿ ನೋಡಿಕೊಳ್ಳಲೇಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.