ಮಡಿಕೇರಿ: ಕುಶಾಲನಗರದ ಮುಳ್ಳುಸೋಗೆಯ ಮಹಿಳೆಯೊಬ್ಬರ ಮನೆಗೆ ಇಬ್ಬರು ನುಗ್ಗಿ ಇದು ವಕ್ಫ್ ಬೋರ್ಡ್ ಆಸ್ತಿ, ಮನೆ ಖಾಲಿ ಮಾಡಬೇಕು ಎಂದು ಬೆದರಿಕೆ ಒಡ್ಡಿದ ಕುರಿತು ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ. ಇಂತಹ ಸುದ್ದಿಗಳನ್ನು ಹರಡಬಾರದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಈ ಕುರಿತ ದೂರು ಸಹ ಪೊಲೀಸ್ ಠಾಣೆಗೆ ಯಾರೂ ನೀಡಿಲ್ಲ. ಆದರೂ, ಪತ್ರದ ಕುರಿತು ತನಿಖೆ ನಡೆಸಿದಾಗ ಮಹಿಳೆ ವಾಸ ಇರುವ ಜಾಗ ವಕ್ಫ್ ಬೋರ್ಡ್ ಆಸ್ತಿಯಲ್ಲ, ಯಾವುದೇ ನೋಟಿಸ್ ನೀಡಿಲ್ಲ, ಯಾರೋಬ್ಬರೂ ಮಂಡಳಿಯಿಂದ ಮನೆಗೆ ತೆರಳಿಲ್ಲ ಎಂಬುದು ಗೊತ್ತಾಗಿದೆ. ಜೊತೆಗೆ, ಮಹಿಳೆಗೆ ಬೆದರಿಕೆ ಕರೆಗಳು ಬಂದಿಲ್ಲ ಎಂಬುದೂ ಸ್ಪಷ್ಟವಾಗಿದೆ. ಸದ್ಯ, ಮಹಿಳೆ ಬರೆದಿರುವ ಪತ್ರದಲ್ಲಿರುವಂತೆ ಇಬ್ಬರು ವ್ಯಕ್ತಿಗಳು ಯಾವ ಉದ್ದೇಶಕ್ಕೆ ಬಂದಿರಬಹುದು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.

ಯಾವುದೇ ಕಾರಣಕ್ಕೂ ಪೂರ್ವಾಪರ ವಿಚಾರಿಸದೇ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ನಂಬಬಾರದು, ಹಂಚಿಕೊಳ್ಳಬಾರದು. ಕೋಮುಸೌಹಾರ್ದತೆ ಕದಡುವ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.