ಕೋಲಾರ: ‘ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಲೀಪಿಂಗ್ ಸೆಲ್ ಮಾಡಿದ್ದಾರೆ. ಮತಾಂಧರಿಗೆ ಪಾಕಿಸ್ತಾನಕ್ಕಿಂತ ಕರ್ನಾಟಕವೇ ಸೇಫ್ ಎನಿಸಿದೆ. ಬಾಬರ್ ದಾಳಿ ಮಾಡಿ ರಾಮಮಂದಿರ ನಾಶ ಮಾಡಿದ. ಈಗ ಸಿದ್ದರಾಮಯ್ಯ ದಲಿತರು, ರೈತರ ಜಮೀನು ಲೂಟಿ ಮಾಡಲು ಮುಸ್ಲಿಮರಿಗೆ ಪರ್ಮಿಟ್ ಸಿದ್ದರಾಮಯ್ಯ ಆಗಿದ್ದಾರೆ. ಅವರನ್ನು ಪಾಕಿಸ್ತಾನಕ್ಕೆ ತರಬೇತಿಗೆ ಕಳುಹಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಾ ಪ್ರಹಾರ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಸಾರಿಗೆ ಸಚಿವನಾಗಿದ್ದಾಗ ಬಸ್ಸುಗಳ ಮೇಲೆ, ‘ಮಗುವಿನಂತೆ ಆರಾಮಾಗಿ ಮಲಗಿ’ ಎಂದು ಬರೆಸಿದ್ದೆ. ಈಗ ಕಾಂಗ್ರೆಸ್ನವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನ, ಬಾಂಗ್ಲಾದ ಮುಸ್ಲಿಮರನ್ನು ರಾಜ್ಯಕ್ಕೆ ಕರೆಸಿ ‘ಮಗುವಿನಂತೆ ಆರಾಮಾಗಿ ಮಲಗಿ’ ಎಂದು ಹೇಳುತ್ತಿದ್ದಾರೆ. ಗಲಭೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

‘ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಕಣ್ಣೀರಿನಿಂದ ಕಾಂಗ್ರೆಸ್ಗೆ ನಡುಕ ಉಂಟಾಗಿದೆ. ದೇವೇಗೌಡರ ಕಣ್ಣೀರು ಸಮುದ್ರ ಇದ್ದಂತೆ. ಅವರು ಕಣ್ಣೀರು ಹಾಕಿದರೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ’ ಎಂದು ತಿಳಿಸಿದರು.

‘ಕಾಂಗ್ರೆಸ್ನವರಿಗೆ ಕಲ್ಲು ಹೃದಯ ಇರುವುದರಿಂದ ಏನೂ ಮಾಡಲು ಆಗುವುದಿಲ್ಲ. ಅವರ ಕಣ್ಣಲ್ಲಿ ಕಲ್ಲುಗಳು ತುಂಬಿಕೊಂಡಿವೆ. ಕಲ್ಲು ಹೃದಯ ಇರುವವರಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ. ಅವರ ಬಗ್ಗೆ ಮಾತನಾಡಿದರೂ ವ್ಯರ್ಥ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.