ಸೋಮನಾಳ (ಕೊಪ್ಪಳ ಜಿಲ್ಲೆ): ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಪ್ರಕರಣವನ್ನು ಯಾರೂ ಕೇಳದಿದ್ದರೂ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ. ಹಿಂದಿನ ಸಿಐಡಿ ತನಿಖೆಗಳು ಏನಾಗಿವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದರ ಮೇಲೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.

ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ಭಾನುವಾರ ಪರಶುರಾಮ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ಪಿಎಸ್ಐ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಪರಶುರಾಮ್ ಸಾವಿನ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ನಡೆದುಕೊಂಡ ರೀತಿ ನನಗೆ ಬೇಸರ ತರಿಸಿದೆ. ದಲಿತ ಕುಟುಂಬದ ಹೆಣ್ಣುಮಗಳಿಗೆ (ಪರಶುರಾಮ್ ಪತ್ನಿ) ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಯಾದಗಿರಿ ಶಾಸಕರು ಹೇಳಿದ್ದಾರೆಂದು ಪರಶುರಾಮ್ ಕುಟುಂಬದವರು ಆರೋಪಿಸಿದ್ದಾರೆ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿಯೇ ನಾವೆಲ್ಲರೂ ಬದುಕುತ್ತಿದ್ದರೂ ಈ ರೀತಿಯ ಹೇಯ ಕೃತ್ಯ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಎನ್ನುವ ಪದ ಬಳಸಿದ ಕಾರಣಕ್ಕಾಗಿ ಸದನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವ ಮಾತಿನಂತೆ ಈಗ ಆಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಅಧಿಕಾರಿಗಳ ಸಾವಾಗುತ್ತಿದೆ. ಪೊಲೀಸ್ ಅಧಿಕಾರಿಗಳನ್ನು ಎರಡು ವರ್ಷದ ಒಳಗೆ ವರ್ಗಾವಣೆ ಮಾಡಬಾರದು ಎಂದು ನಾವು ಕಾನೂನು ಮಾಡಿದ್ದೆವು. ಕಾಂಗ್ರೆಸ್ ಪಕ್ಷದವರು ಇದನ್ನು ಒಂದು ವರ್ಷಕ್ಕೆ ಇಳಿಸಿದರು. ಠಾಣೆಗೆ ಬಂದು ಏಳು ತಿಂಗಳಾಗುವಷ್ಟರಲ್ಲಿಯೇ ಪರುಶುರಾಮ್ ಅವರನ್ನು ವರ್ಗಾವಣೆ ಮಾಡಿದ್ದು ಯಾಕೆ? ವರ್ಗಾವಣೆ ಮಾಡಿದ ಅಧಿಕಾರಿ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರಶುರಾಮ್ ಸಾವು ಹೇಗಾಗಿದೆ ಎಂದು ವರದಿಯೇ ಬಂದಿಲ್ಲ, ಆದರೂ ಗೃಹ ಸಚಿವ ಪರಮೇಶ್ವರ್ ಹೃದಯಾಘಾತದಿಂದ ಸಾವು ಎಂದು ತೀರ್ಪು ನೀಡಿದ್ದಾರೆ. ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿರುವ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಬಂಧನವಾಗಲೇಬೇಕು, ಇಲ್ಲವಾದರೆ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
.ನನಗೇನೂ ಬೇಡ್ರಪ್ಪ, ಮಗನ್ ವಾಪಸ್ ತಂದುಕೊಡ್ರಿ: ಮೃತ PSI ಪರಶುರಾಮ್ ಪೋಷಕರ ಕಣ್ಣೀರು.PSI Death | ಎಂಟು ಸರ್ಕಾರಿ ನೌಕರಿ ಪಡೆದಿದ್ದ ಪರಶುರಾಮ್.PSI Death In Karnataka | ಶಾಸಕ, ಪುತ್ರನ ಮೇಲೆ ಎಫ್ಐಆರ್, ಪ್ರಕರಣ ಸಿಐಡಿಗೆ .ಸರ್ಕಾರದ ವರ್ಗಾವಣೆ ದಂಧೆಗೆ ಮತ್ತೊಂದು ಬಲಿ: PSI ಸಾವು ಖಂಡಿಸಿ ಶಾಸಕ ಯತ್ನಾಳ ಕಿಡಿ.PSI ಪರಶುರಾಮ್ ಸಾವು: ಶಾಸಕ, ಪುತ್ರನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು.ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣ: ಯಾದಗಿರಿಗೆ ಸಿಐಡಿ ತಂಡ ಭೇಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.