ಗಂಗಾವತಿ (ಕೊಪ್ಪಳ ಜಿಲ್ಲೆ): ‘ಬಜರಂಗದಳ ನಿಷೇಧದ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಎಲ್ಲ ಭಕ್ತರು ಮತದಾನದ ದಿನ ಮೇ 10ರಂದು ಬಿಜೆಪಿಗೆ ಮತ ಹಾಕಿಸಿ, ಕಾಂಗ್ರೆಸ್ ನಿರ್ನಾಮ ಮಾಡಬೇಕು’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅಂಜನಾದ್ರಿ ಬೆಟ್ಟದ ಮುಂಭಾಗದಲ್ಲಿ ಸೋಮವಾರ ಜನರೊಂದಿಗೆ ಹನುಮಾನ್ ಚಾಲೀಸ್ ಪಠಣ ಮಾಡಿದ ಬಳಿಕ ಮಾತನಾಡಿದ ಅವರು ‘ಭಾರತ ರಾಮನ ದೇಶವಾಗಿದೆ. ಕಾಂಗ್ರೆಸ್ ಈ ಬಗ್ಗೆ ತುಚ್ಛವಾಗಿ ಮಾತನಾಡಿ ಮುಸ್ಲಿಮರನ್ನು ಓಲೈಸುತ್ತಿದೆ’ ಎಂದರು.

‘ಹನುಮ ಅಪಾರ ಶಕ್ತಿವಂತ. ಆಂಜನೇಯ ಸೀತೆಯನ್ನು ಹುಡುಕಲು ಹೋಗಿ ಲಂಕೆಗೆ ಹೇಗೆ ಬೆಂಕಿ ಹಚ್ಚಿದ್ದನೊ ಅದೇ ರೀತಿ ಹನುಮ ಭಕ್ತರು ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಕಾಂಗ್ರೆಸ್‌ಗೆ ಬೆಂಕಿ ಹಚ್ಚಿ, ಫಲಿತಾಂಶದ ದಿನ 13ರಂದು ಬೆಂಕಿಯ ವಾಸನೆ ಬರುವಂತೆ ಮಾಡಬೇಕು’ ಎಂದರು.

ಇದಕ್ಕೂ ಮುನ್ನ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿದ ಭಕ್ತರು ‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದರು. ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಯಾದ ಬಳಿಕ ಅಂಜನಾದ್ರಿಯಲ್ಲಿ ಇದೇ ಮೊದಲು ಚಾಲೀಸ್ ಪಠಣ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.