ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ಸೋಮವಾರ ಕಾಮದಹನದ ನಂತರ ಮಂಗಳವಾರ ಬಣ್ಣದ ಹಬ್ಬ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣ ಎರಚುವುದು ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಪಟ್ಟಣ ಅಘೋಷಿತ ಬಂದ್‌ನಂತೆ ಕಂಡುಬಂದಿತು.

ಈ ಬಾರಿ ಪುರುಷರಿಗಿಂತ ಮಹಿಳೆಯರು, ಮಕ್ಕಳು, ವಿವಿಧ ಮಹಿಳಾ ಸಂಘಟನೆಗಳು ಉಲ್ಲಾಸದೊಂದಿಗೆ ಓಕುಳಿ ಹಬ್ಬದಲ್ಲಿ ಮಿಂದೆದ್ದರು. ಆದರೆ ಬಹುತೇಕ ಕಡೆಗಳಲ್ಲಿ ಬಣ್ಣದ ಹಬ್ಬದ ನೆಪದಲ್ಲಿ ರಾಸಾಯನಿಕಗಳು, ಸುಟ್ಟ ಎಂಜಿನ್ ಆಯಿಲ್ ಬಳಕೆ ಮಾಡಿದ ದೃಶ್ಯಗಳೂ ಕಂಡುಬಂದವು.

ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನ ಮನೆ ಬಿಟ್ಟು ಹೊರಗೆ ಬರಲಿಲ್ಲ. ಅಲ್ಲದೆ ನೀರಿನ ಕೊರತೆಯೂ ಬಣ್ಣದ ಹಬ್ಬದ ಮೇಲೆ ಪರಿಣಾಮ ಬೀರಿದೆ ಎಂದು ಜನರು ಹೇಳಿದರು.

ರಸ್ತೆಯಲ್ಲೇ ಕಾಮದಹನ ಪೊಲೀಸರ ಮೌನ

ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿಯೇ ಕಟ್ಟಿಗೆ ಟೈರ್ ಪ್ಲಾಸ್ಟಿಕ್ ವಸ್ತುಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚಿ ಕಾಮದಹನ ನಡೆಸಿದ್ದರಿಂದ ಡಾಂಬರ್ ಕಾಂಕ್ರೀಟ್ ರಸ್ತೆಗಳು ಹಾಳಾದವು. ಮಲ್ಲಯ್ಯ ವೃತ್ತ ಕನಕವೃತ್ತ ಮುರುಡಿ ಭೀಮಜ್ಜ ವೃತ್ತ ಟಿಪ್ಪು ಸುಲ್ತಾನ್ ವೃತ್ತ ಹಳೆ ಬಜಾರ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ಯುವಕರು ಕಾಮದಹನದ ನೆಪದಲ್ಲಿ ಇಂಥ ವಿಕೃತಿ ಮೆರೆದದ್ದು ಕಂಡುಬಂದಿತು. ಅಪಾಯಕಾರಿ ರೀತಿಯಲ್ಲಿ ಬೆಂಕಿ ಕೆನ್ನಾಲಿಗೆಯಿಂದ ರಸ್ತೆಯಲ್ಲಿನ ವಾಹನ ಸವಾರರು ಪರದಾಡುವಂತಾಗಿತ್ತು. ಆದರೂ ಲೋಕೋಪಯೋಗಿ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಎಷ್ಟು ಸರಿ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.