ಕೊಪ್ಪಳ: ನಗರದ ವಿವಿಧೆಡೆ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಿ.ಎಚ್.ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಪ್ರಾಧ್ಯಾಪಕರಾದ ಭಾಗ್ಯಜ್ಯೋತಿ, ಸಂತೋಷ ಕುಮಾರಿ, ಶಿವನಾಥ ಪಾಲ್ಗೊಂಡಿದ್ದರು.

ಗವಿಸಿದ್ಧೇಶ್ವರ ಶಾಲೆ: ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಮುಖ್ಯೋಪಧ್ಯಾಯ ಅಮರೇಶ ಕರಡಿ ರಾಷ್ಟ್ರ ಧ್ವಜಾರೋಹಣ ಮಾಡಿದರು.

ಹೊರತಟ್ನಾಳ: ತಾಲ್ಲೂಕಿನ ಹೊರತಟ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯ ಬಸನಗೌಡ ಮರೇಗೌಡ ಮಾತನಾಡಿ ‘ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೋರಾಟದ ಫಲದಿಂದಾಗಿ ನಿಜಾಮರ ಆಡಳಿತದಿಂದ ನಮ್ಮನ್ನು ಮುಕ್ತಿ ಮಾಡಿತ್ತು. ಈ ಭಾಗವನ್ನು ಶೈಕ್ಷಣಿಕವಾಗಿ ಮುಂದುವರಿಸುವ ದೃಷ್ಟಿಕೋನದಿಂದ ಹಲವಾರು ಮಹಾನ್ ನಾಯಕರು ಹೋರಾಟದ ಭಾಗವಾಗಿದ್ದರು’ ಎಂದರು.

ಎಸ್ಡಿಎಂಸಿ ಹನುಮಂತಪ್ಪ ಕುಟುಂಬನಹಳ್ಳಿ, ವೆಂಕನಗೌಡ ಮಾಲಿಪಾಟೀಲ, ರಮೇಶ ಗದಗಲ್, ಮೆಹಬೂಬ್, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹಂಸಾಗರ ಪಾಲ್ಗೊಂಡಿದ್ದರು.

ಸರ್ಕಾರಿ ಕಾಲೇಜು: ’ನಿಜಾಮರ ವಿರುದ್ಧದ ಹೋರಾಟದ ಬಳಿಕ ನಮಗೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಲಭಿಸಿತು’ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಗಣಪತಿ ಲಮಾಣಿ ಹೆಳಿದರು. ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ವಿಠೋಬ ಎಸ್, ಹುಲಿಗೆಮ್ಮ, ಮಲ್ಲಿಕಾರ್ಜುನ, ಪ್ರದೀಪ್ ಕುಮಾರ್, ನರಸಿಂಹ, ಅಶೋಕ ಕುಮಾರ್, ಸುಮಿತ್ರಾ, ಸೌಮ್ಯ ಹಿರೇಮಠ, ಹನುಮಪ್ಪ, ಶ್ರೀಕಾಂತ್, ತಾರಮತಿ, ಲಕ್ಷ್ಮಿ ಎ.ಕೆ, ರುಕ್ಕಮ್ಮ, ಚಾಂದುಬಿ, ಗವಿಸಿದ್ದಪ್ಪ ಭಾಗವಹಿಸಿದ್ದರು.

ಜ್ಞಾನ ಬಂಧು ಸಂಸ್ಥೆ: ಭಾಗ್ಯನಗರದ ಜ್ಞಾನಬಂಧು ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದರು.

ದಾನಪ್ಪ ಕವಲೂರು ಮಾತನಾಡಿ ‘ನಿಜಾಮನ ದಬ್ಬಾಳಿಕೆಯಿಂದ ನಮ್ಮ ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ವಾತಂತ್ರ್ಯ ಕ್ಷೀಣಿಸಿತ್ತು. ಸರ್ದಾರ ಪಟೇಲರ್ ದಿಟ್ಟ ನಿಲುವಿನಿಂದ ವಿಮೋಚನೆ ಲಭಿಸಿತು’ ಎಂದರು.

ಶಿಕ್ಷಕಿ ರಾಧಾ ಏಣಿ, ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಜಿ.ಎಸ್., ಶಾಲಾ ಪ್ರಾಚಾರ್ಯ ಲಿಲಿಯನ್ ಆಂಟೋನಿ, ಉಪ ಪ್ರಾಚಾರ್ಯೆ ಜ್ಯೋತಿ ಎಸ್.ಎಸ್, ಶಿಕ್ಷಕ ನಾಗರಾಜ ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.