ಆನೆಗೊಂದಿ (ಗಂಗಾವತಿ): ಆನೆಗೊಂದಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ ‘ನಾನು ಐಪಿಎಲ್ ಆಟಗಾರನಿದ್ದಂತೆ. ಅವಕಾಶ ಯಾವ ಕಡೆ ಸಿಗುತ್ತದೆಯೇ ಅಲ್ಲಿರುತ್ತೇನೆ’ ಎಂದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ ಎನ್ನುವ ಮಾತು ಕೂಡ ವೇದಿಕೆಯಲ್ಲಿದ್ದ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ದೊಡ್ಡನಗೌಡ ಪಾಟೀಲ ಅವರಿಂದ ಬಂತು.

ಈ ವಿಷಯದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ರೆಡ್ಡಿ ’ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಪ್ರತಿ ವರ್ಷವೂ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರೊಡನೆ ಒಂದು ಹೆಜ್ಜೆ ಹಾಕಿರಬಹುದು. ನನ್ನವು ಇನ್ನೂ ಎರಡು ಹೆಜ್ಜೆಗಳಿದ್ದು ಅವು ನಿಮ್ಮ (ಬಿಜೆಪಿ) ಪರವಾಗಿ ಬರಬೇಕಾದರೆ ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅಂಜನಾದ್ರಿಗೆ ₹2 ಸಾವಿರ ಕೋಟಿ ಘೋಷಿಸಬೇಕು’ ಎಂದು ಬಿಜೆಪಿಗೆ ಆಮಿಷವೊಡ್ಡಿದರು.
.ಆನೆಗೊಂದಿ: ಆತುರದಲ್ಲಿ ಉತ್ಸವ ಆಯೋಜನೆ, ಕುರ್ಚಿಗಾಗಿ ಹಾಡಿದ ಸ್ಥಳೀಯ ಕಲಾವಿದರು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.