ಕೊಪ್ಪಳ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಂದಿಲ್ಲ. ಹೀಗಾಗಿ ಮಕ್ಕಳು ಹಿಂದಿನ ವರ್ಷ ಕೊಟ್ಟ ಸಮವಸ್ತ್ರಗಳನ್ನೇ ಹಾಕಿಕೊಂಡು ಶಾಲೆಗೆ ಬರುವಂತಾಗಿದೆ.

ಸರ್ಕಾರ ವಿದ್ಯಾವಿಕಾಸ ಯೋಜನೆಯಲ್ಲಿ ಮೊದಲು ಒಂದು ಜೊತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುತ್ತಿತ್ತು. ಸರ್ವ ಶಿಕ್ಷಣ ಅಭಿಯಾನದ ಅಡಿ ಎರಡನೇ ಸೆಟ್‌ನ ಸಮವಸ್ತ್ರ ಕೊಡಲಾಗುತ್ತಿತ್ತು. ಮೇ 16ರಂದೇ ಶಾಲೆಗಳು ಆರಂಭವಾಗಿವೆ.

ಜಿಲ್ಲೆಯಲ್ಲಿ 963 ಪ್ರಾಥಮಿಕ, 154 ಸರ್ಕಾರಿ ಪ್ರೌಢಶಾಲೆಗಳು ಇವೆ. ಒಟ್ಟು 61 ಅನುದಾನಿತ ಶಾಲೆಗಳಿವೆ. ಗಂಗಾವತಿ ತಾಲ್ಲೂಕು ಒಂದರಲ್ಲಿಯೇ313 ಪ್ರಾಥಮಿಕ ಶಾಲೆಗಳು ಇವೆ.

ಪ್ರತಿ ವರ್ಷ ತರಗತಿಗಳು ಆರಂಭವಾಗುವ ಮೊದಲೇ ಆಯಾ ಶಾಲೆಗಳಿಗೆ ಸಮವಸ್ತ್ರ ತಲುಪುತ್ತಿದ್ದವು. ಕೋವಿಡ್ ಕಾರಣದಿಂದಾಗಿ ಹಿಂದಿನ ಎರಡು ವರ್ಷ ಸರಿಯಾಗಿ ಶಾಲೆಗಳೇ ನಡೆದಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಅದಕ್ಕೂ ಮೊದಲು ನೀಡಿದ ಸಮವಸ್ತ್ರಗಳನ್ನು ಇಟ್ಟುಕೊಂಡಿಲ್ಲ. ಈಗ ಅವುಗಳನ್ನೇ ಹಾಕಿಕೊಂಡು ಬರುವುದು ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ.

ಇಕ್ಕಟ್ಟಿನಲ್ಲಿ ಶಿಕ್ಷಕರು: ವಿದ್ಯಾರ್ಥಿಗಳು ಶಾಲೆಗೆ ಸಮವಸ್ತ್ರ ಧರಿಸಿ ಬರುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸಮವಸ್ತ್ರವಿಲ್ಲದೆ ಬರುವ ಮಕ್ಕಳಿಗೆ ಧರಸಿಯೇ ಬರಬೇಕು ಎಂದು ಶಿಕ್ಷಕರು ಕಟ್ಟುನಿಟ್ಟಾಗಿ ಹೇಳುವಂತೆಯೂ ಇಲ್ಲ. ಹಲವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪೋಷಕರು ’ಹಿಂದೆ ಕೊಟ್ಟಿದ್ದ ಸಮವಸ್ತ್ರವೇ ಇಲ್ಲ. ಈಗ ಎಲ್ಲಿಂದ ತರುವುದು‘ ಎನ್ನುತ್ತಿದ್ದಾರೆ.

ಅನೇಕ ಕಡೆ ಕೊಳೆಗೇರಿ, ಚಿಂದಿ ಆಯುವ ಮತ್ತು ಬಡ ಮಕ್ಕಳು ಎರಡು ಜೊತೆ ಸಮವಸ್ತ್ರವಿದ್ದರೆ ದಿನಪೂರ್ತಿ ಒಂದು ಜೊತೆ ಹಾಕಿಕೊಂಡು ಇನ್ನೊಂದು ಜೊತೆ ಮರುದಿನ ಧರಿಸಿಕೊಂಡು ಬರುತ್ತಿದ್ದರು. ಸಮವಸ್ತ್ರ ಪೂರೈಕೆಯಾಗದ ಕಾರಣ ಕೆಲವರು ಇರುವ ಹಳೆಯ ಸಮವಸ್ತ್ರ ಇನ್ನೂ ಕೆಲವರು ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಬರುತ್ತಿದ್ದಾರೆ.

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಕುಕನೂರಿನ ದರ್ಶನ ಪಾಟೀಲ ’ಸರ್ಕಾರ ಪ್ರತಿವರ್ಷ ತರಗತಿ ಆರಂಭಕ್ಕೆ ಮೊದಲು ಎರಡು ಜೊತೆ ಸಮವಸ್ತ್ರ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಈ ವರ್ಷ ಸಮವಸ್ತ್ರ ಯಾವಾಗ ಬರುತ್ತವೆ ಎನ್ನುವುದು ಗೊತ್ತಿಲ್ಲ. ಬರುತ್ತವೆಯೇ, ಇಲ್ಲವೇ ಎನ್ನುವುದು ಕೂಡ ಖಚಿತವಿಲ್ಲ. ಇದನ್ನಾದರೂ ಸರ್ಕಾರ ಸ್ಪಷ್ಟಪಡಿಸಿದರೆ ನಾವೇ ಹಣ ಖರ್ಚು ಮಾಡಿ ಮಕ್ಕಳಿಗೆ ಸಮವಸ್ತ್ರ ಕೊಡಿಸಬಹುದು‘ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.